ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕದ್ರಿ ಗೋಪಾಲನಾಥ್‌ಗೆ ಗವಾಯಿ ಪ್ರಶಸ್ತಿ
ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರು ಪುಟ್ಟರಾಜ್ ಗವಾಯಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಧಾರವಾಡದ ಪ್ರತಿಷ್ಠಿತ ಡಾ| ಪುಟ್ಟರಾಜ ಗವಾಯಿ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಈ ಪ್ರಶಸ್ತಿ ಅವರಿಗೆ ಲಭಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪಾಣೆ ಮಂಗಳೂರಿನಲ್ಲಿ ಜನಿಸಿದ ಕದ್ರಿಯವರು ನಾದಸ್ವರ ಕಲಾವಿದರಾಗಿದ್ದ ತಮ್ಮ ತಂದೆಯವರಿಂದ ಪ್ರೇರಿತರಾಗಿ ಸಂಗೀತಾಸಕ್ತಿ ರೂಢಿಸಿಕೊಂಡರು. ಮೈಸೂರು ಬ್ಯಾಂಡ್ಸೆಟ್‌ನಲ್ಲಿನ ಸ್ಯಾಕ್ಸೋಫೋನ್ ವಾದನದಿಂದ ಆಕರ್ಷಿತರಾದ ಅವರು ಕ್ರಮೇಣ ಈ ವಾದ್ಯದೆಡೆಗೆ ಒಲವು ಮೂಡಿಸಿಕೊಂಡರು.

ವಿದೇಶಿ ವಾದ್ಯವೆಂದೇ ಕರೆಯಲ್ಪಟ್ಟಿದ್ದ ಸ್ಯಾಕ್ಸೋಫೋನ್ ವಾದ್ಯವನ್ನು ತಮ್ಮ ಸುಮಾರು ಎರಡು ದಶಕಗಳ ಅನನ್ಯ ತಪಸ್ಸಿನಿಂದಾಗಿ ಕರ್ನಾಟಕ ಸಂಗೀತಕ್ಕೆ ಒಗ್ಗಿಸಿಕೊಂಡ ಕದ್ರಿಯವರದು ಸ್ಯಾಕ್ಸೋಫೋನ್‌ಗೆ ಪರ್ಯಾಯ ಹೆಸರು.

ಇದೇ ತಿಂಗಳ 13ರಂದು ಧಾರವಾಡದ ಕಲಾಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಪ್ರಶಸ್ತಿಯು 25 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿರುತ್ತದೆ ಎಂದು ಪ್ರತಿಷ್ಠಾನವು ತಿಳಿಸಿದೆ.
ಮತ್ತಷ್ಟು
ಹೊಸ ನಿಲ್ದಾಣದಲ್ಲಿ ವಿಮಾನ ಹಾರಾಟ ವಿಳಂಬ?
ಕಾರವಾರ: ದುರಂತ ನೌಕೆಯಿಂದ ಅನಿಲ ಸೋರಿಕೆ
ಗ್ಯಾಸ್ ಸಿಲಿಂಡರ್ ಸ್ಫೋಟ: 8 ಮನೆಗಳು ಜಖಂ
ಕಾಂಗ್ರೆಸ್ ಜತೆ ಪ್ರಕಾಶ್ ಮಾತುಕತೆ
ನಿಪ್ಪಾಣಿ ನಗರಸಭೆ ವಜಾಗೆ ಕರವೇ ಒತ್ತಾಯ
ಮಾರ್ಚ್ 23ಕ್ಕೆ ರಾಜ್ಯಕ್ಕೆ ರಾಹುಲ್ ಗಾಂಧಿ