ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಪಾಲಾದ ಪ್ರಕಾಶ್
NRB
ಅತ್ತಲೋ ಇತ್ತಲೋ ಎಂಬಂತಿದ್ದ ಎಂ.ಪಿ.ಪ್ರಕಾಶ್ ಕಾಂಗ್ರೆಸ್ ಸೇರ್ಪಡೆಗೆ ಶನಿವಾರ ಕಾಲ ಕೂಡಿ ಬಂದಿದ್ದು ಅವರು ತಮ್ಮ ಬೆಂಬಲಿಗರ ಜೊತೆ ಮಲ್ಲಿಕಾರ್ಜುನ ಖರ್ಗೆಯವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ.

ಪ್ರಕಾಶ್ ಜೊತೆ ವಸಂತ್ ಬಂಗೇರ, ಶರಣ ಬಸಪ್ಪ ದರ್ಶನಾಪುರ, ಸಂತೋಷ್ ಲಾಡ್, ಗುರುದೇವ್, ಚಿದಾನಂದ, ನಾಗರಾಜ್, ಏಕಾಂತಯ್ಯ, ಅಮರೇಗೌಡ ಬಯ್ಯಾಪುರ, ಬಿ.ಸಿ.ಪಾಟೀಲ್, ರಾಜು ನರಸಿಂಹ ನಾಯಕ್, ಮುನಿಶಾಮಪ್ಪ, ಪ್ರಫುಲ್ಲ ಮಧುಕರ್, ಮಹದೇವ ಪ್ರಸಾದ್ ಇವರೇ ಮೊದಲಾದ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

ಸೇರ್ಪಡೆಗೊಂಡ ಎಲ್ಲರಿಗೂ ಪಕ್ಷದ ಪ್ರಾಥಮಿಕ ಸದಸ್ಯತ್ವ ಸಿಕ್ಕಿದ್ದು, ಇದೇ ತಿಂಗಳ 15ರಂದು ಪ್ರಥ್ವಿರಾಜ್ ಚವ್ಹಾಣ್ರವರು ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗುವ ಸಮಾವೇಶದಲ್ಲಿ ಪಕ್ಷದ ಸಾಂಕೇತಿಕ ಸೇರ್ಪಡೆಯನ್ನು ಆಯೋಜಿಸಲಾಗುವುದು. ಸಮಾಲೋಚನೆಗಳು ನಡೆದ ನಂತರವೇ ಯಾರ್ಯಾರಿಗೆ ಟಿಕೆಟ್ ನೀಡಬೇಕೆಂದು ಪಕ್ಷ ನಿರ್ಧರಿಸಲಿದೆ ಎಂದು ತಿಳಿದುಬಂದಿದೆ.

ಪಕ್ಷದ ಸದಸ್ಯತ್ವ ಸಿಕ್ಕ ನಂತರ ಎಂ.ಪಿ.ಪ್ರಕಾಶ್ ಮಾತನಾಡುತ್ತಾ, ಹೈಕಮಾಂಡ್ ಮುಂದೆ ಯಾವುದೇ ಸ್ಥಾನಮಾನದ ಬೇಡಿಕೆ ಇಟ್ಟಿಲ್ಲ. ಆದರೆ ಸೂಕ್ತ ಮಾನ್ಯತೆ ನೀಡುವುದರ ಕುರಿತು ಹೈಕಮಾಂಡ್ ಭರವಸೆ ನೀಡಿದೆ. ಪಕ್ಷದ ಬಲವರ್ಧನೆಯಲ್ಲಿ ಶ್ರಮವಹಿಸುವ ಕುರಿತು ಈಗಾಗಲೇ ತಮ್ಮೆಲ್ಲಾ ಬೆಂಬಲಿಗರೂ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಮತ್ತಷ್ಟು
ಕದ್ರಿ ಗೋಪಾಲನಾಥ್‌ಗೆ ಗವಾಯಿ ಪ್ರಶಸ್ತಿ
ಹೊಸ ನಿಲ್ದಾಣದಲ್ಲಿ ವಿಮಾನ ಹಾರಾಟ ವಿಳಂಬ?
ಕಾರವಾರ: ದುರಂತ ನೌಕೆಯಿಂದ ಅನಿಲ ಸೋರಿಕೆ
ಗ್ಯಾಸ್ ಸಿಲಿಂಡರ್ ಸ್ಫೋಟ: 8 ಮನೆಗಳು ಜಖಂ
ಕಾಂಗ್ರೆಸ್ ಜತೆ ಪ್ರಕಾಶ್ ಮಾತುಕತೆ
ನಿಪ್ಪಾಣಿ ನಗರಸಭೆ ವಜಾಗೆ ಕರವೇ ಒತ್ತಾಯ