ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಸೂರಿನಲ್ಲಿ ಕರವೇ ಪ್ರತಿಭಟನೆ
ಬೀದರ್, ಕಾರವಾರ ಇವೇ ಮೊದಲಾದ ಕರ್ನಾಟಕದ ಗಡಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ವಿವಾದಾತ್ಮಕ ಗೊತ್ತುವಳಿ ಅಂಗೀಕರಿಸಿದ ನಿಪ್ಪಾಣಿ ನಗರಸಭೆಯ ಕ್ರಮವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶನಿವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.

ನಿಪ್ಪಾಣಿಯಲ್ಲಿ ವಿವಾದಾತ್ಮಕ ನಿರ್ಣಯ ಕೈಗೊಂಡಿದ್ದೇ ಅಲ್ಲದೇ ಅಲ್ಲಿನ ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗದ್ದಲ ಉಂಟುಮಾಡಿದ್ದು ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿದ್ದನ್ನು ಪ್ರತಿಭಟಿಸಿದ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ಹಲವಾರು ಕಾರ್ಯಕರ್ತರನ್ನು ಬಂಧಿಸಿದ್ದರಿಂದ, ರಾಜ್ಯದ ಗಡಿ ಪ್ರದೇಶದ ಹಿತರಕ್ಷಣೆಗಾಗಿ ಹೋರಡುತ್ತಿರುವ ಕಾರ್ಯಕರ್ತರನ್ನೇ ಬಂಧಿಸುವುದು ಎಷ್ಟು ಸೂಕ್ತ ಎಂದು ಘೋಷಣೆ ಕೂಗಿದ ಕಾರ್ಯಕರ್ತರು ಬಂಧಿತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

ಪ್ರತಿಭಟನೆಯ ಕಾರಣದಿಂದಾಗಿ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ಕೊಂಚ ಅಸ್ತವ್ಯಸ್ತವಾಯಿತಾದರೂ ಯಾವುದೇ ಅನಪೇಕ್ಷಿತ ಘಟನೆಗಳು ಸಂಭವಿಸಿಲ್ಲ. ಆದರೂ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮತ್ತಷ್ಟು
ತುಳುರಾಜ್ಯ: ಪುನರೂರು ಮಾತಿಗೆ ಕರವೇ ಆಕ್ಷೇಪ
ಕಾಂಗ್ರೆಸ್ ಪಾಲಾದ ಪ್ರಕಾಶ್
ಕದ್ರಿ ಗೋಪಾಲನಾಥ್‌ಗೆ ಗವಾಯಿ ಪ್ರಶಸ್ತಿ
ಹೊಸ ನಿಲ್ದಾಣದಲ್ಲಿ ವಿಮಾನ ಹಾರಾಟ ವಿಳಂಬ?
ಕಾರವಾರ: ದುರಂತ ನೌಕೆಯಿಂದ ಅನಿಲ ಸೋರಿಕೆ
ಗ್ಯಾಸ್ ಸಿಲಿಂಡರ್ ಸ್ಫೋಟ: 8 ಮನೆಗಳು ಜಖಂ