ಮಹಿಳೆಯರ ಅಭಿವೃದ್ದಿ ಮತ್ತು ಸಬಲೀಕರಣಕ್ಕಾಗಿ ದುಡಿಯುತ್ತಿರುವ ಚಿತ್ರನಟಿ ಜಯಮಾಲಾ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಕಿತ್ತೂರು ಚೆನ್ನಮ್ಮ ಪ್ರಶಸ್ತಿಯಿಂದ ನೀಡಿ ಗೌರವಿಸಲಾಯಿತು.
ಅಂತಾರಾಷ್ಟ್ತ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಸನ್ಮಾನ ಸಮಾರಂಭದಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಹಾಗೂ ರಾಜ್ಯಪಾಲರ ಸಲಹೆಗಾರ ಪಿ.ಕೆ.ಎಚ್.ತಾರಕನ್ ಉಪಸ್ಥಿತರಿದ್ದರು.
ರೋಹಿಣಿ ನಿಲೇಕಣಿ, ಸವಿತಾ ಅಣ್ಣಪ್ಪನವರ್, ಯಶೋಧ ಪಂಡಿತ್ರಾವ್, ಕುಂದಾಪುರದ ಆಶಾ ರಮೇಶ್ ಸೇರಿದಂತೆ ಹಲವರಿಗೆ ನೀಡಲಾದ ಕಿತ್ತೂರು ಚೆನ್ನಮ್ಮ ಪ್ರಶಸ್ತಿಯು ತಲಾ ಹತ್ತು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಇದೇ ರೀತಿಯಲ್ಲಿ ಬೆಂಗಳೂರಿನ ಅಭಯ ಮಹಿಳಾ ಕೇಂದ್ರ, ಅಥಣಿಯ ವಿಮೋಚನಾ ದೇವದಾಸಿಯರ ಪುನರ್ವಸತಿ ಸಂಘ, ಹಾಸನದ ಪ್ರಚೋದನಾ ಸಂಸ್ಥೆಗಳು ಸೇರಿದಂತೆ ಇನ್ನೂ ಹಲವು ಸಂಘ ಸಂಸ್ಥೆಗಳು ಪಡೆದುಕೊಂಡ ಈ ಪ್ರಶಸ್ತಿಯಲ್ಲಿ ತಲಾ 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಸೇರಿದೆ.
|