ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಕ್ಷದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ: ಮೆರಾಜುದ್ದೀನ್
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ತಿಳಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪ್ರತಿ ಜಿಲ್ಲೆಗೆ ಒಂದು ಅಥವಾ ಎರಡು ಸ್ಥಾನಗಳನ್ನು ಮಹಿಳೆಯರಿಗೆ ನೀಡಲಾಗುವುದು. ಆದರೆ ವರ್ಚಸ್ಸು, ಗೆಲ್ಲುವ ಸಾಧ್ಯತೆಗಳು ಇದಕ್ಕೆ ಪ್ರಮುಖ ಮಾನದಂಡಗಳಾಗಿರುತ್ತವೆ ಎಂದು ತಿಳಿಸಿದರು.

ಈಗಾಗಲೇ 224 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ಟಿಕೆಟ್ ಆಕಾಂಕ್ಷಿಗಳು 5 ಸಾವಿರ ರೂಪಾಯಿ ಡಿಡಿ ಕಳಿಸಿದರೆ ಅವರ ಗೆಲ್ಲುವ ಸಾಧ್ಯತೆ ನೋಡಿಕೊಂಡು ಟಿಕೆಟ್ ನೀಡಿಕೆಗಾಗಿ ಸಂದರ್ಶನವನ್ನು ನಡೆಸಲಾಗುವುದು ಎಂದು ಪಟೇಲ್ ತಿಳಿಸಿದರು.

ಪಕ್ಷಕ್ಕೆ ಯಾರೂ ಬೇಕಾದರೂ ಬರಬಹುದು, ಪಕ್ಷದಿಂದ ಯಾರು ಬೇಕಾದರೂ ಹೋಗಬಹುದು ಎಂದು ಈಗಾಗಲೇ ತಿಳಿಸಿರುವುದರಿಂದ ಎಂ.ಪಿ.ಪ್ರಕಾಶ್ರವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತಮ್ಮದೇನೂ ತಕರಾರಿಲ್ಲ ಎಂದು ತಿಳಿಸಿದ ಪಟೇಲ್, ರಾಜ್ಯ ರಾಜಕೀಯಕ್ಕೆ ಕೃಷ್ಣರವರು ಮರಳುವುದರಿಂದ ಅವರ ಆಡಳಿತ ಹಾಗೂ ಕುಮಾರಸ್ವಾಮಿಯವರ ಆಡಳಿತವನ್ನು ಅಳೆದು ನೋಡಲು ಜನತೆಗೆ ಸಾಧ್ಯವಾಗಲಿದೆ. ಒಂದು ರೀತಿಯಲ್ಲಿ ಜೆಡಿಎಸ್‌ಗೆ ಇದರಿಂದ ಪ್ರಯೋಜನವೇ ಹೆಚ್ಚು ಎಂದು ನುಡಿದರು.
ಮತ್ತಷ್ಟು
ಜಯಮಾಲಾ ಕೀರಿಟಕ್ಕೆ ಇನ್ನೊಂದು ಗರಿ
ಮೈಸೂರಿನಲ್ಲಿ ಕರವೇ ಪ್ರತಿಭಟನೆ
ತುಳುರಾಜ್ಯ: ಪುನರೂರು ಮಾತಿಗೆ ಕರವೇ ಆಕ್ಷೇಪ
ಕಾಂಗ್ರೆಸ್ ಪಾಲಾದ ಪ್ರಕಾಶ್
ಕದ್ರಿ ಗೋಪಾಲನಾಥ್‌ಗೆ ಗವಾಯಿ ಪ್ರಶಸ್ತಿ
ಹೊಸ ನಿಲ್ದಾಣದಲ್ಲಿ ವಿಮಾನ ಹಾರಾಟ ವಿಳಂಬ?