ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಟೋ ಚಾಲಕನ ಮೇಲೆ ಪೊಲೀಸ್ ಹಲ್ಲೆ
ಚಾಮರಾಜಪೇಟೆ ಉದ್ವಿಗ್ನ
ತೀವ್ರ ಅಸ್ವಸ್ಥಗೊಂಡಿದ್ದ ತನ್ನ ತಂದೆಯನ್ನು ಆಸ್ಪತ್ರೆಗೆ ರಿಕ್ಷಾದಲ್ಲಿ ಕರೆದೋಯ್ಯುತ್ತಿದ್ದ ರಿಕ್ಷಾ ಚಾಲಕನನ್ನು ಟ್ರಾಫಿಕ್ ಪೊಲೀಸ್‌ ತಡೆದು, ಆತನ ವಿನಂತಿಯನ್ನು ಲೆಕ್ಕಿಸದೆ ಹಲ್ಲೆ ನಡೆಸಿದ ವೇಳೆ, ಆಟೋದಲ್ಲಿದ್ದ ರೋಗಿ ಮೃತಪಟ್ಟ ಘಟನೆ ಭಾನುವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿ ಆಟೋ ಚಾಲಕನ ತಂದೆಯಾಗಿದ್ದು, ಈ ಘಟನೆಯಿಂದ ಚಾಮರಾಜಪೇಟೆಯ ಉಮಾ ಟಾಕೀಸ್ ಬಳಿಯಲ್ಲಿ ಬಿಗುವಿನ ವಾತಾವರಣ ತಲೆದೋರಿದೆ. ನಗರದ ಆಟೋ ಚಾಲಕರು ಹಾಗೂ ಸ್ಥಳೀಯರು ಟ್ರಾಫಿಕ್ ಪೊಲೀಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳಕ್ಕೆ ಆಗಮಿಸಿದ ಡಿಸಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ಬಿಗು ಬಂದೋ ಬಸ್ತ್ ಮಾಡಲಾಗಿದೆ.

ಮೃತ ವ್ಯಕ್ತಿಯ ಶವವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದ ಆಟೋ ಚಾಲಕರು ಹಾಗೂ ಸ್ಥಳೀಯರು, ತಪ್ಪಿಸಿಕೊಂಡಿರುವ ಟ್ರಾಫಿಕ್ ಪೊಲೀಸನನ್ನು ಕರೆ ತರುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸಿದರು. ಇದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ಆಟೋಚಾಲಕನ ತಂದೆ ತೀವ್ರ ಅಸ್ವಸ್ಥನಾಗಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ತೆರಳುತ್ತಿದ್ದ ವೇಳೆ ಚಾಮರಾಜಪೇಟೆಯಲ್ಲಿ ಆಟೋ ಚಾಲಕನನ್ನು ತಡೆದ ಟ್ರಾಫಿಕ್ ಪೊಲೀಸ್, ಆತನ ಮಾತನ್ನು ಲೆಕ್ಕಿಸದೆ ರಸ್ತೆಯಲ್ಲಿ ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇದನ್ನು ಕಂಡ ಆಟೋ ಚಾಲಕನ ತಂದೆ ಸ್ಥಳದಲ್ಲಿಯೇ ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ಆಟೋ ಚಾಲಕರು ಹಾಗೂ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದರು.
ಮತ್ತಷ್ಟು
ಪಕ್ಷದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ: ಮೆರಾಜುದ್ದೀನ್
ಜಯಮಾಲಾ ಕೀರಿಟಕ್ಕೆ ಇನ್ನೊಂದು ಗರಿ
ಮೈಸೂರಿನಲ್ಲಿ ಕರವೇ ಪ್ರತಿಭಟನೆ
ತುಳುರಾಜ್ಯ: ಪುನರೂರು ಮಾತಿಗೆ ಕರವೇ ಆಕ್ಷೇಪ
ಕಾಂಗ್ರೆಸ್ ಪಾಲಾದ ಪ್ರಕಾಶ್
ಕದ್ರಿ ಗೋಪಾಲನಾಥ್‌ಗೆ ಗವಾಯಿ ಪ್ರಶಸ್ತಿ