ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯ ಬಜೆಟ್‌ನಲ್ಲಿ ಚುನಾವಣಾ ಮಸಾಲೆ ಇರಲಿದೆಯೇ?
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವಿರುವ ಹಿನ್ನೆಲೆಯಲ್ಲಿ ಸೋಮವಾ ರಾಜ್ಯ ಬಜೆಟ್ ಸಂಸತ್ತಿನಲ್ಲಿ ಮಂಡನೆಯಾಗಲಿದ್ದು, ಇದರಲ್ಲಿ ಮೂರು ತಿಂಗಳ ಅವಧಿಯ ಲೇಖಾನುದಾನ ಮಾತ್ರ ಹೊಂದಿರುವುದರಿಂದ ಅಷ್ಟೇನೂ ಮಹತ್ವದಲ್ಲದಿದ್ದರೂ, ಕಾಂಗ್ರೆಸ್ ಈ ಮೂಲಕ ಚುನಾವಣಾ ಲಾಭ ಪಡೆಯುವ ಲೆಕ್ಕಚಾರದಲ್ಲಿದೆ.

ರಾಜ್ಯಪಾಲ ರಾಮೇಶ್ವರ ಠಾಕೂರ್ ನೇತೃತ್ವದಲ್ಲಿ ರೂಪಗೊಂಡಿರುವ ರಾಜ್ಯ ಬಜೆಟಿನಲ್ಲಿ ಹೊಸ ಯೋಜನೆಗಳ ಕುರಿತು ನಿರೀಕ್ಷೆ ವ್ಯಕ್ತಪಡಿಸುವಂತಿಲ್ಲ. ಆದರೂ, ರಾಜ್ಯದ ಬೊಕ್ಕಸದಲ್ಲಿರುವ ಹಣವನ್ನು ಯಾವ ಇಲಾಖೆಗೆ ಎಷ್ಟೆಷ್ಟು ನೀಡಬೇಕೆಂಬ ಬಗ್ಗೆ ಬಜೆಟಿನಲ್ಲಿ ತಿಳಿಸಬಹುದು.

ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಮಂಡಿಸಿರುವ ಬಜೆಟಿನಲ್ಲಿ ಪ್ರಕಟಿಸಿರುವ ಎಲ್ಲಾ ಕಾರ್ಯಕ್ರಮಗಳನ್ನು ಮುಂದುವರಿಸಬೇಕು ಎಂದು ಬಿಜೆಪಿ ಹೇಳಿದರೆ, ಕೇಂದ್ರ ಬಜೆಟಿನಲ್ಲಿ ಮಂಡಿಸಿರುವ 60 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾದಲ್ಲಿ ಕರ್ನಾಟಕಕ್ಕೆ ಎಷ್ಟು ದೊರೆಯಲಿದೆ ಎಂಬುದನ್ನು ಪ್ರಕಟಿಸಿದರೆ, ಅದೇ ಬಜೆಟಿನ ದೊಡ್ಡ ಸಾಧನೆ ಎಂಬುದು ಜೆಡಿಎಸ್ ಅಭಿಪ್ರಾಯ.

ರಾಜ್ಯದಲ್ಲಿ ಶೀಘ್ರವೇ ಚುನಾವಣೆಗಳು ನಡೆಯುವ ಎಲ್ಲ ಸಾಧ್ಯತೆಗಳಿರುವುದರಿಂದ ಕಾಂಗ್ರೆಸ್ ಪಕ್ಷವು ಜನಮರುಳು ಅಂಶಗಳನ್ನು ಕೂಡ ಬಜೆಟಿನಲ್ಲಿ ಸೇರಿಸುವ ಸಾಧ್ಯತೆಗಳಿವೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಮತ್ತಷ್ಟು
ಜೆಡಿಎಸ್ ಚುನಾವಣಾ ರಣಕಹಳೆ: ಜೈತ್ರಯಾತ್ರೆಗೆ ಚಾಲನೆ
ಸಿಪಿಎಂ ರಾಜ್ಯ ಕಾರ್ಯದರ್ಶಿ ಮನೆಯಲ್ಲಿ ದಾಂಧಲೆ
ಆಟಕ್ಕೆ ತೆರಳಿದ 4 ಬಾಲಕಿಯರು ನಾಪತ್ತೆ
ಸಂತ್ರಸ್ತರಿಗೆ ಉದ್ಯೋಗಕ್ಕೆ ಕರವೇ ಒತ್ತಾಯ
ಆಟೋ ಚಾಲಕನ ಮೇಲೆ ಪೊಲೀಸ್ ಹಲ್ಲೆ
ಪಕ್ಷದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ: ಮೆರಾಜುದ್ದೀನ್