ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಡ್ಡಾದಿಡ್ಡಿ ಬಸ್ ಓಡಿಸಿದ ಕ್ಲೀನರ್: ಮಹಿಳೆ ಸಾವು
ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸೊಂದು ಅಡ್ಡಾದಿಡ್ಡಿಯಾಗಿ ಚಲಿಸಿದ ಪರಿಣಾಮ ಒಬ್ಬ ಮಹಿಳೆ ಮೃತಪಟ್ಟಿದ್ದು, ಆರು ಜನರಿಗೆ ಗಾಯಗಳಾಗಿವೆ.

ಸವಿತಾ ಅನ್ನುವ ಮಹಿಳೆ ಮೃತಪಟ್ಟ ದುರ್ದೈವಿ. ವಿಕ್ರಾಂತ್ ಹಾಗೂ ಮಾಥ್ಯೂ ಎಂಬವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ಲೀನರ್ ಒಬ್ಬಾತ ಈ ಖಾಸಗಿ ಬಸ್ ಚಲಾಯಿಸಿದ್ದೇ ಈ ಘಟನೆಗೆ ಕಾರಣ ಎಂದು ರೊಚ್ಚಿಗೆದ್ದ ಸಾರ್ವಜನಿಕರು, ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಬಸ್ ಜಖಂಗೊಂಡಿದೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗುವಿನ ವಾತಾವರಣ ಕಂಡು ಬಂದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ನಗರದ ಸ್ಟೇಟ್ ಬ್ಯಾಂಕ್ ಬಳಿ ನಿಂತಿದ್ದ ಖಾಸಗಿ ಬಸ್ಸನ್ನು, ಬಸ್ ಕ್ಲೀನರ್ ಚಲಾಯಿಸಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿ, ಅದು ವೇಗವಾಗಿ ಅತ್ತಿಂದಿತ್ತ ಚಲಿಸತೊಡಗಿತು. ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಅಲ್ಲೇ ಇದ್ದ ಕಾರಿಗೂ ಡಿಕ್ಕಿ ಹೊಡೆಯಿತು. ಬಳಿಕ ಮತ್ತೆ ಮುಂದೆ ಚಲಿಸಿದ ಬಸ್, ಅಂಗಡಿಗೂ ಡಿಕ್ಕಿ ಹೊಡೆಯಿತು. ಈ ಸಂದರ್ಭದಲ್ಲಿ ಅಲ್ಲಿದ್ದ ಮಹಿಳೆ ಖಾಸಗಿ ಬಸ್ಸಿನಡಿ ಸಿಕ್ಕಿ ಸಾವನ್ನಪ್ಪಿದ್ದು, ಇತರರಿಗೆ ಗಾಯಗಳಾಗಿವೆ. ಚಲಾಯಿಸಿದ ಕ್ಲೀನರ್ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಮತ್ತಷ್ಟು
ಚುನಾವಣೆಗೆ ಬಿಜೆಪಿ ರೆಡಿ: 17ರಂದು ರಾಜ್ಯಕ್ಕೆ ಮೋದಿ
ಸ್ಪೀಡ್ ಗವರ್ನರ್‌ಗೆ ಸುಪ್ರೀಂ ಕೋರ್ಟ್ ಬ್ರೇಕ್
ರಾಜ್ಯ ಬಜೆಟ್‌ನಲ್ಲಿ ಚುನಾವಣಾ ಮಸಾಲೆ ಇರಲಿದೆಯೇ?
ಜೆಡಿಎಸ್ ಚುನಾವಣಾ ರಣಕಹಳೆ: ಜೈತ್ರಯಾತ್ರೆಗೆ ಚಾಲನೆ
ಸಿಪಿಎಂ ರಾಜ್ಯ ಕಾರ್ಯದರ್ಶಿ ಮನೆಯಲ್ಲಿ ದಾಂಧಲೆ
ಆಟಕ್ಕೆ ತೆರಳಿದ 4 ಬಾಲಕಿಯರು ನಾಪತ್ತೆ