ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಂಜುಂಡಪ್ಪ ವರದಿಗೆ ಒತ್ತು ನೀಡಿದ ಚಿದು ಬಜೆಟ್
ಪ್ರಾದೇಶಿಕ ಅಸಮತೋಲನೆ ನಿವಾರಿಸಲು ಈ ಬಾರಿಯ ಬಜೆಟಿನಲ್ಲಿ ಆದ್ಯತೆ ನೀಡಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ತಿಳಿಸಿದರು.

ಸೋಮವಾರ ಸಂಜೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ನಂಜುಂಡಪ್ಪ ವರದಿ ಜಾರಿಗೆ 2489 ಕೋಟಿ ರೂ. ಹಣವನ್ನು ಮೀಸಲಿರಿಸಲಾಗಿದೆ ಎಂದರು. ಹಳ್ಳಿಗಳ ಅಭಿವೃದ್ದಿಗಾಗಿ 3,300 ಕೋಟಿ ರೂ. ನಿಗದಿಗೊಳಿಸಲಾಗಿದೆ.

ಈ ಬಾರಿ ಬಜೆಟ್ ವಿಶೇಷತೆಯೆಂದರೆ ಜನರಿಗೆ ಹೆಚ್ಚುವರಿ ತೆರಿಗೆಯನ್ನು ವಿಧಿಸಲಾಗಿಲ್ಲ. ಸರಕಾರವೊಂದು ಆಳ್ವಿಕೆಯಲ್ಲಿರುವಾಗ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಯಾವುದೇ ಮಂತ್ರಿ ಮಹೋದಯರು ಯಾವತ್ತಿಗೂ ನಿರ್ಲಕ್ಷ್ಯ ಮಾಡುತ್ತಿದ್ದರು. ಆದರೆ ಇದೀಗ ಕೇಂದ್ರದ ಕೃಪೆಯಡಿ ನಂಜುಂಡಪ್ಪ ವರದಿಗೆ ಒತ್ತು ನೀಡಿ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಹಣ ಮೀಸಲಿರಿಸಿರುವುದು ಸ್ವಾಗತಾರ್ಹ.

ಆದರೆ ವಿರೋಧ ಪಕ್ಷಗಳು ಇದನ್ನು ಕಾಂಗ್ರೆಸ್ ಪ್ರೇರಿತ ಬಜೆಟ್ ಎಂದು ಲೇವಡಿ ಮಾಡಿವೆ. ಇದು ಕಾಂಗ್ರೆಸ್ ಬಜೆಟ್, ಇದು ಜನತೆಗೆ ಮಕ್ಮಲ್ ಟೋಪಿ ಹಾಕಿದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಮತ್ತಷ್ಟು
ಎಚ್ಎಎಲ್ ವಿಮಾನ ನಿಲ್ದಾಣ: ಸರಕಾರಕ್ಕೆ ನೋಟಿಸ್
ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರುವ ಇಂಗಿತ
ಅಡ್ಡಾದಿಡ್ಡಿ ಬಸ್ ಓಡಿಸಿದ ಕ್ಲೀನರ್: ಮಹಿಳೆ ಸಾವು
ಚುನಾವಣೆಗೆ ಬಿಜೆಪಿ ರೆಡಿ: 17ರಂದು ರಾಜ್ಯಕ್ಕೆ ಮೋದಿ
ಸ್ಪೀಡ್ ಗವರ್ನರ್‌ಗೆ ಸುಪ್ರೀಂ ಕೋರ್ಟ್ ಬ್ರೇಕ್
ರಾಜ್ಯ ಬಜೆಟ್‌ನಲ್ಲಿ ಚುನಾವಣಾ ಮಸಾಲೆ ಇರಲಿದೆಯೇ?