ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಭಿವೃದ್ಧಿ ಪರ ಬಜೆಟ್: ಕಾಂಗ್ರೆಸ್; ನೀರಸ: ಬಿಜೆಪಿ, ಜೆಡಿಎಸ್
ಸಂಸತ್ತಿನಲ್ಲಿ ಮಂಡನೆಯಾಗಿರುವ ರಾಜ್ಯ ಬಜೆಟ್ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ. ಅಭಿವೃದ್ದಿಗೆ ಒತ್ತು ನೀಡಲಾಗಿದೆ ಎಂದು ಆಡಳಿತ ಪಕ್ಷಗಳು ಹೇಳಿಕೊಂಡರೆ, ಜನವಿರೋಧಿ ಬಜೆಟ್ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಅಭಿವೃದ್ದಿಗೆ ಯಾವುದೇ ಕೊಡುಗೆ ನೀಡಿಲ್ಲ. ಹಿಂದುಳಿದ ತಾಲೂಕುಗಳ ಅಭಿವೃದ್ದಿಗೆ ತಮ್ಮ ಸರ್ಕಾರವೇ ಮೊದಲು ಚಾಲನೆ ನೀಡಿದ್ದು, ಈಗ ಹಿಂದಿನ ಬಜೆಟಿಗಿಂತ ಹೆಚ್ಚಿನ ಅನುದಾನವನ್ನು ಕೊಟ್ಟಿದ್ದೇವೆ ಎಂದು ಹೇಳುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.

ಅಭಿವೃದ್ದಿಗೆ ಪೂರಕವಾದ ಬಜೆಟ್ ಎಂದು ವಿಶ್ಲೇಷಿಸಿರುವ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಜೆಟ್ ಅಂಶಗಳು ಎಲ್ಲಾ ರಂಗಗಳು ಪ್ರಗತಿ ಪಥದಲ್ಲಿ ಮುಂದುವರಿಯಲು ಸಹಾಯಕವಾಗಿದೆ. ಮುಖ್ಯವಾಗಿ ನಂಜುಂಡಪ್ಪ ವರದಿ ಜಾರಿಗೆ ಆದ್ಯತೆ ನೀಡಿರುವುದು ಹಾಗೂ ಐಟಿ ಉದ್ಯಮಕ್ಕೆ ಹೆಚ್ಚಿನ ಅನುದಾನ ಮೀಸಲಿಟ್ಟಿರುವುದು ಮೆಚ್ಚುವ ಅಂಶಗಳಾಗಿವೆ ಎಂದು ತಿಳಿಸಿದ್ದಾರೆ.

ಜನಪ್ರಿಯ ಸರಕಾರ ಇಲ್ಲದಿದ್ದಾಗ ಇಂತಹ ನೀರಸ ಬಜೆಟ್ ಮಂಡನೆ ಆಗುವುದು ಸಹಜ. ಸರ್ಕಾರಕ್ಕೆ ಶೋಷಿತ ವರ್ಗಗಳ ಕುರಿತು ಇರುವ ಕಾಳಜಿ ಈಗ ಬಯಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಟೀಕಿಸಿದ್ದರೆ, ಜನಪರವಾದ ರಾಜ್ಯ ಬಜೆಟಿನಲ್ಲಿ ಯಾವುದೇ ದುರುದ್ದೇಶವಿಲ್ಲ. ಯೋಜನಾ ಗಾತ್ರ ಹೆಚ್ಚಾಗಿರುವುದರಿಂದ ಅಭಿವೃದ್ದಿಗೆ ಆದ್ಯತೆ ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ನಂಜುಂಡಪ್ಪ ವರದಿಗೆ ಒತ್ತು ನೀಡಿದ ಚಿದು ಬಜೆಟ್
ಎಚ್ಎಎಲ್ ವಿಮಾನ ನಿಲ್ದಾಣ: ಸರಕಾರಕ್ಕೆ ನೋಟಿಸ್
ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರುವ ಇಂಗಿತ
ಅಡ್ಡಾದಿಡ್ಡಿ ಬಸ್ ಓಡಿಸಿದ ಕ್ಲೀನರ್: ಮಹಿಳೆ ಸಾವು
ಚುನಾವಣೆಗೆ ಬಿಜೆಪಿ ರೆಡಿ: 17ರಂದು ರಾಜ್ಯಕ್ಕೆ ಮೋದಿ
ಸ್ಪೀಡ್ ಗವರ್ನರ್‌ಗೆ ಸುಪ್ರೀಂ ಕೋರ್ಟ್ ಬ್ರೇಕ್