ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಚ್ಎಎಲ್ : ವಿಮಾನಗಳ ಹಾರಾಟ ಮುಂದುವರಿಕೆ
ದೇವನಹಳ್ಳಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಾರ್ಯಾರಂಭ ಮಾಡಿದ ನಂತರವೂ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ನಾನ್-ಷೆಡ್ಯೂಲ್ಡ್ ವಿಮಾನಗಳ ಹಾರಾಟ ನಡೆಯಲಿದೆ ಎಂದು ತಿಳಿದುಬಂದಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಧ್ಯಕ್ಷ ಅಶೋಕ್ ಕೆ.ಭವೇಜರವರು, ನಾನ್-ಷೆಡ್ಯೂಲ್ಡ್ ವಿಮಾನಗಳ ಜೊತೆಗೆ ತರಬೇತಿ ವಿಮಾನಗಳು ಮತ್ತು ಅತಿಗಣ್ಯರ ವಿಮಾನಗಳ ಹಾರಾಟಕ್ಕೆ ಇಲ್ಲಿ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ನುಡಿದರು.

ಅರವತ್ತು ಟನ್ನಷ್ಟು ಸರಕು ಸಾಗಿಸುವ ವಿಮಾನಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಅವುಗಳ ಹಾರಾಟ ಪ್ರಾರಂಭವಾಗಲಿದೆ. ಈ ವಿಮಾನದ ತಯಾರಿಕೆಗೆ ಹಲವು ದಿನಗಳ ಶ್ರಮವನ್ನು ವಿನಿಯೋಗಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.

ಪೂರ್ವ ನಿರ್ಧಾರಿತ ಕಾರ್ಯಕ್ರಮದಂತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಬೇಕಿತ್ತು. ಅದರೆ ದಿನಗಳು ಹತ್ತಿರ ಬಂದಂತೆ ಈ ಪ್ರಕ್ರಿಯೆಗೆ ಸಂಬಂಧಿಸಿ ಇನ್ನೂ ಹಲವು ಸ್ವರೂಪದ ಕಾರ್ಯಗಳು ಅಗಬೇಕಿರುವುದು ಅರಿವಿಗೆ ಬಂದಿದ್ದರಿಂದ ಇದನ್ನು ಮುಂದೂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಮತ್ತಷ್ಟು
ಒಗ್ಗಟ್ಟಾಗಿ ದುಡಿದಲ್ಲಿ ನಿಚ್ಚಳ ಬಹುಮತ: ಅಂಬರೀಷ್
ಟಿಕೇಟ್ ಹಂಚಿಕೆ: ಬಿಜೆಪಿ ಮಹತ್ವದ ಸಭೆ
ಚುನಾವಣೆ ಪ್ರಚಾರಕ್ಕೆ ಸೋನಿಯಾ, ಪ್ರಧಾನಿ
ಚುನಾವಣೆ ಸಿದ್ಧತೆ: ಪರಿಶೀಲನೆಗೆ ಆಯೋಗ ಭೇಟಿ
ಅಬ್ಬರದ ಪ್ರಚಾರಕ್ಕೆ ಆಯೋಗದ ಕಡಿವಾಣ
ಏ.8ರಂದು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ