ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅದ್ನಾನ್‌ಗಾಗಿ ಇಂದೂರ್‌ಗೆ ತೆರಳಿದ ಸಿಓಡಿ ತಂಡ
ರಾಜ್ಯದಲ್ಲಿ ಬಂಧಿಸಲಾಗಿರುವ ಒಟ್ಟು 7 ಜನ ಶಂಕಿತ ಉಗ್ರರನ್ನು ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಸಿಓಡಿ ಪೊಲೀಸರು ಈಗ ಉತ್ತರ ಪ್ರದೇಶದಲ್ಲಿ ಬಂಧಿತನಾಗಿರುವ ಅದ್ನಾನ್‌ನನ್ನು ಕರೆತರುವುದಕ್ಕಾಗಿ ಇಂದು (ಗುರುವಾರ) ಇಂದೂರ್‌ಗೆ ಪ್ರಯಾಣ ಬೆಳೆಸಿದ್ದಾರೆ.

ಇತ್ತೀಚೆಗೆ ಬಂಧಿಸಲಾದ ಶಂಕಿತ ಉಗ್ರರ ವಿಚಾರಣೆ ಸಂದರ್ಭದಲ್ಲಿ ಅದ್ನಾನ್ ಆಲಿಯಾಸ್ ಆಸಿಫ್ ಹುಸೇನ್ ರಾಜ್ಯದಲ್ಲಿ ನಡೆದ ಅನೇಕ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂಬ ಅಂಶ ಬೆಳಕಿಗೆ ಬಂದಿದ್ದರಿಂದ ಸಿಓಡಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಆತನನ್ನು ರಾಜ್ಯಕ್ಕೆ ಕರೆತರಲು ತಯಾರಿ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಇಂದೂರ್‌ಗೆ ತೆರಳಿರುವ ಸಿಓಡಿ ಪೊಲೀಸರು ಅದ್ನಾನ್‌ನನ್ನು ವಶಕ್ಕೆ ತೆಗೆದುಕೊಂಡು ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ಕರೆತರಲಿದ್ದಾರೆ ಎಂದು ತಿಳಿದು ಬಂದಿದೆ. ಈತನನ್ನು ವಿಚಾರಣೆಗೆ ಒಳಪಡಿಸಿದರೆ ಭಯೋತ್ಪಾದಕರ ಮೂಲ ಗುಟ್ಟು ರಟ್ಟಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಅಲ್ಲದೆ, ಇದೇ ತಿಂಗಳ 8ಹಾಗೂ 9ರಂದು ಅದ್ನಾನ್ ಊರಾದ ವಿಜಾಪುರಕ್ಕೆ ಕರೆದುಕೊಂಡು ಹೋಗಿ ಸಿಓಡಿ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸಲಿದ್ದಾರೆ. ಬಳಿಕ ಹುಬ್ಬಳ್ಳಿಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಮತ್ತಷ್ಟು
ಹೊಗೇನಕಲ್: ವಿವಾದಕ್ಕೆ ಕಲಾವಿದರ ಬಲಿಪಶು ಬೇಡ
ಎಚ್ಎಎಲ್ : ವಿಮಾನಗಳ ಹಾರಾಟ ಮುಂದುವರಿಕೆ
ಒಗ್ಗಟ್ಟಾಗಿ ದುಡಿದಲ್ಲಿ ನಿಚ್ಚಳ ಬಹುಮತ: ಅಂಬರೀಷ್
ಟಿಕೇಟ್ ಹಂಚಿಕೆ: ಬಿಜೆಪಿ ಮಹತ್ವದ ಸಭೆ
ಚುನಾವಣೆ ಪ್ರಚಾರಕ್ಕೆ ಸೋನಿಯಾ, ಪ್ರಧಾನಿ
ಚುನಾವಣೆ ಸಿದ್ಧತೆ: ಪರಿಶೀಲನೆಗೆ ಆಯೋಗ ಭೇಟಿ