ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ಯಾಂಟರ್ ಡಿಕ್ಕಿ : ಒಬ್ಬನ ಸಾವು,13ಮಂದಿಗೆ ಗಾಯ
ಬ್ರೇಕ್ ವೈಫಲ್ಯದಿಂದಾಗಿ ಕ್ಯಾಂಟರ್ ವಾಹನವೊಂದು ಒಂಭತ್ತು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮೃತಪಟ್ಟಿದ್ದು, 13 ಜನರಿಗೆ ಗಾಯಗಳಾಗಿವೆ.

ನಿನ್ನೆ(ಗುರುವಾರ) ತಡರಾತ್ರಿ ಮಾಗಡಿ ರಸ್ತೆ ಕೊಟ್ಟಿಗೆ ಪಾಳ್ಯದಲ್ಲಿ ಈ ಘಟನೆ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಹಾಗೂ ಸರ್ವೋದಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಇಳಿಜಾರಿನಲ್ಲಿ ಕ್ಯಾಂಟರ್ ಬ್ರೇಕ್ ವಿಫಲಗೊಂಡ ಪರಿಣಾಮ ನಿಯಂತ್ರಣ ಕಳೆದುಕೊಂಡ ಚಾಲಕ ಸರಣಿ ಅಪಘಾತವೆಸಗಿದ್ದಾನೆ ಎಂದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ. ಇದರಿಂದ ಎರಡು ಮಾರುತಿ ವ್ಯಾನ್, ಎರಡು ಆಟೋ, ಒಂದು ಕಾರು ಮತ್ತೊಂದು ಕ್ಯಾಂಟರ್ ವಾಹನಗಳು ಜಖಂಗೊಂಡಿದೆ.

ಈ ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಕ್ಯಾಂಟರ್‌ಗೆ ಬೆಂಕಿ ಹಚ್ಚಿದರು. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಸಫಲರಾದರು. ಇದರಿಂದ ಮಾಗಡಿ ರಸ್ತೆಯಲ್ಲಿ ಸುಮಾರು ಮೂರು ತಾಸುಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಖಾಲಿ ಪ್ಲಾಸ್ಟಿಕ್ ಡ್ರಂಗಳನ್ನು ಹೊತ್ತು ಕ್ಯಾಂಟರ್ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು, ಪ್ರಕರಣವನ್ನು ಕಾಮಾಕ್ಷಿಪಾಳ್ಯದ ಸಂಚಾರಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಮತ್ತಷ್ಟು
ಅದ್ನಾನ್‌ಗಾಗಿ ಇಂದೂರ್‌ಗೆ ತೆರಳಿದ ಸಿಓಡಿ ತಂಡ
ಹೊಗೇನಕಲ್: ವಿವಾದಕ್ಕೆ ಕಲಾವಿದರ ಬಲಿಪಶು ಬೇಡ
ಎಚ್ಎಎಲ್ : ವಿಮಾನಗಳ ಹಾರಾಟ ಮುಂದುವರಿಕೆ
ಒಗ್ಗಟ್ಟಾಗಿ ದುಡಿದಲ್ಲಿ ನಿಚ್ಚಳ ಬಹುಮತ: ಅಂಬರೀಷ್
ಟಿಕೇಟ್ ಹಂಚಿಕೆ: ಬಿಜೆಪಿ ಮಹತ್ವದ ಸಭೆ
ಚುನಾವಣೆ ಪ್ರಚಾರಕ್ಕೆ ಸೋನಿಯಾ, ಪ್ರಧಾನಿ