ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯೋಜನೆಗೆ ಅಸ್ತು ಎಂದಿದ್ದು ಬಿಜೆಪಿ-ಜೆಡಿಎಸ್: ಪೂಜಾರಿ
ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಹೊತ್ತಿಸಿರುವ ಕಿಡಿ ರಾಜ್ಯಾದ್ಯಂತ ಹೊತ್ತಿ ಉರಿಯುತ್ತಿದೆ. ಈ ವಿವಾದದ ಇತ್ಯರ್ಥಕ್ಕೆ ಮಧ್ಯೆ ಪ್ರವೇಶಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರು ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯೋಜನೆ ಬಗ್ಗೆ ಕರ್ನಾಟಕದ ಆಕ್ಷೇಪಣೆಗಳ ಕುರಿತು ಪ್ರಧಾನಿಯವರಿಗೆ ವಿವರಿಸಲಾಗಿದೆ. ಯೋಜನೆಗೆ ಚಾಲನೆ ನೀಡುವ ಮುನ್ನ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ನೆರೆ ರಾಜ್ಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮಿಳುನಾಡು ಯೋಜನೆಗೆ ಮುಂದಾಗಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೆ, ರಾಜ್ಯದಲ್ಲಿ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬರುವ ತನಕ ತಮಿಳುನಾಡು ಈ ಯೋಜನೆಯ ಕುರಿತು ಸುಮ್ಮನಿರುವುದೇ ವಾಸಿ. ಇದು ಉಭಯ ರಾಜ್ಯಗಳಿಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ, ಹೊಗೇನಕಲ್ ಯೋಜನೆಗೆ ಕೈಗೆತ್ತಿಕೊಳ್ಳಲು ಹಿಂದಿನ ಎನ್‌ಡಿಎ ಸರ್ಕಾರವೇ ಅನುಮತಿ ನೀಡಿದ್ದು, ಎನ್‌ಡಿಎ ಕ್ರಮಕ್ಕೆ ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಬೆಂಬಲ ಸೂಚಿಸಿದ್ದರು. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ಈ ವಿವಾದದ ಕುರಿತು ಮಾತನಾಡುವ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಕ್ಯಾಂಟರ್ ಡಿಕ್ಕಿ : ಒಬ್ಬನ ಸಾವು,13ಮಂದಿಗೆ ಗಾಯ
ಅದ್ನಾನ್‌ಗಾಗಿ ಇಂದೂರ್‌ಗೆ ತೆರಳಿದ ಸಿಓಡಿ ತಂಡ
ಹೊಗೇನಕಲ್: ವಿವಾದಕ್ಕೆ ಕಲಾವಿದರ ಬಲಿಪಶು ಬೇಡ
ಎಚ್ಎಎಲ್ : ವಿಮಾನಗಳ ಹಾರಾಟ ಮುಂದುವರಿಕೆ
ಒಗ್ಗಟ್ಟಾಗಿ ದುಡಿದಲ್ಲಿ ನಿಚ್ಚಳ ಬಹುಮತ: ಅಂಬರೀಷ್
ಟಿಕೇಟ್ ಹಂಚಿಕೆ: ಬಿಜೆಪಿ ಮಹತ್ವದ ಸಭೆ