ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಗೇನಕಲ್ : ಕನ್ನಡ ಚಿತ್ರರಂಗದ ಪ್ರತಿಭಟನೆ
ಹೊಗೇನಕಲ್ ಹೊಗೆಯ ಜ್ವಾಲೆ ರಾಜ್ಯಾದ್ಯಂತ ಹೊತ್ತಿಕೊಂಡಿದ್ದು, ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಇಂದು(ಶುಕ್ರವಾರ) ಪುರಭವನದಲ್ಲಿ ಕನ್ನಡ ಚಿತ್ರರಂಗವು ಪ್ರತಿಭಟನೆಯನ್ನು ಪ್ರಾರಂಭಿಸಿದೆ.

ಬೆಳಿಗ್ಗೆ 10.30 ಪ್ರಾರಂಭವಾದ ಪ್ರತಿಭಟನೆಯಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಕಲಾವಿದರು ಧರಣಿಯಲ್ಲಿ ಭಾಗವಹಿಸಿದ್ದಾರೆ. ಸಾ.ರಾ. ಗೋವಿಂದ ನೇತೃತ್ವದಲ್ಲಿ ನಡೆಯುತ್ತಿರುವ ಶಾಂತಿ ಪ್ರತಿಭಟನೆಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್, ರವಿಚಂದ್ರನ್, ಪ್ರೇಮ್, ಅನುಪ್ರಭಾಕರ್, ಜಗ್ಗೆಶ್, ದರ್ಶನ್, ರಮ್ಯ, ಶ್ರೀನಾಥ್ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಿದ್ದಾರೆ.

ಪ್ರತಿಭಟನೆಯಲ್ಲಿ ನಟ ಸುದೀಪ್ ಹಾಗೂ ವಿಷ್ಣುವರ್ಧನ್ ಅವರ ಅನುಪಸ್ಥಿತಿ ಕಂಡು ಬಂದಿದ್ದರೂ, ಅನಿವಾರ್ಯ ಕಾರಣಗಳಿಂದ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಹುತೇಕ ಕಲಾವಿದರು ರಾಜ್ಯಕ್ಕಾಗಿ ಒಗ್ಗಟ್ಟಾಗಿ ಶ್ರಮಿಸುತ್ತೇವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ನಟ ಜಗ್ಗೇಶ್, ಹೊಗೇನಕಲ್ ಯೋಜನೆಗೆ ಪರಿಹಾರವನ್ನು ಕಂಡುಕೊಳ್ಳಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದರು. ಕಲಾವಿದರ ಆಗಮನದಿಂದ ಪರಿಸ್ಥಿತಿ ಕೈ ಮೀರಿ ಹೋಗದಂತೆ ತಡೆಯಲು ಪೊಲೀಸ್ ಇಲಾಖೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಬಂದೋ ಬಸ್ತ್ ಏರ್ಪಡಿಸಿದೆ.
ಮತ್ತಷ್ಟು
ಸಿದ್ದು-ಮಹದೇವ್ ಮುಖಾಮುಖಿ!
ಯೋಜನೆಗೆ ಅಸ್ತು ಎಂದಿದ್ದು ಬಿಜೆಪಿ-ಜೆಡಿಎಸ್: ಪೂಜಾರಿ
ಕ್ಯಾಂಟರ್ ಡಿಕ್ಕಿ : ಒಬ್ಬನ ಸಾವು,13ಮಂದಿಗೆ ಗಾಯ
ಅದ್ನಾನ್‌ಗಾಗಿ ಇಂದೂರ್‌ಗೆ ತೆರಳಿದ ಸಿಓಡಿ ತಂಡ
ಹೊಗೇನಕಲ್: ವಿವಾದಕ್ಕೆ ಕಲಾವಿದರ ಬಲಿಪಶು ಬೇಡ
ಎಚ್ಎಎಲ್ : ವಿಮಾನಗಳ ಹಾರಾಟ ಮುಂದುವರಿಕೆ