ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇತಿಹಾಸದ ಪ್ರಜ್ಞೆ ಇಲ್ಲದ ಪೂಜಾರಿ ಹೇಳಿಕೆ: ಬಿಜೆಪಿ
ವಿಧಾನಸಭಾ ಚುನಾವಣೆಗೆ ಮುನ್ನುಗ್ಗುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಅವರನ್ನು ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಬಿಜೆಪಿ ವಕ್ತಾರ ಸುರೇಶ್ ಕುಮಾರ್, ಚುನಾವಣಾ ಪ್ರಚಾರ ಸಮಿತಿಯಲ್ಲಿ 25 ಮಂದಿ ಮುಖಂಡರುಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಸಮಿತಿಗೆ ರಾಷ್ಟ್ರೀಯ ಮುಖಂಡರುಗಳಾದ ಯಶವಂತ್‌ಸಿನ್ಹಾ, ಅರುಣ್ ಜೇಟ್ಲಿ, ಯಡಿಯೂರಪ್ಪ, ಸಂಸದ ಅನಂತಕುಮಾರ್ ವಿಶೇಷ ಆಹ್ವಾನಿತರಾಗುತ್ತಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಹೊಗೇನಕಲ್ ವಿವಾದಕ್ಕೆ ಬಿಜೆಪಿ ಕಾರಣ ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಿದ ಅವರು, ಇತಿಹಾಸದ ಪ್ರಜ್ಞೆ ಇಲ್ಲದೆ ಇಂತಹ ಹೇಳಿಕೆಯನ್ನು ನೀಡಿದ್ದಾರೆ. ಯೋಜನೆಯ ಕುರಿತು ಎನ್‌ಡಿಎ ಸರ್ಕಾರದಲ್ಲಿ ಚಿಂತನೆ ನಡೆಸಲಾಗಿತ್ತೇ ವಿನಃ ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ತಿಳಿಸಿದರು.

ಈ ಮಧ್ಯೆ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರೆಸಿರುವ ಬಿಜೆಪಿ ಇದುವರೆಗೆ 15 ಜಿಲ್ಲೆಗಳ ಅಭ್ಯರ್ಥಿಗಳ ಪಟ್ಟಿಯನ್ನು ಈ ತಿಂಗಳ 11ರಂದು ಬಿಡುಗಡೆ ಮಾಡಲಿದ್ದು, ಉಳಿದ 15 ಜಿಲ್ಲೆಗಳ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ರಾತ್ರಿಯೊಳಗೆ ಅಂತಿಮಗೊಳ್ಳಲಿದೆ ಎಂದು ಬಿಜೆಪಿ ತಿಳಿಸಿದೆ.

ನಾಳೆ ನಗರಕ್ಕೆ ಬಿಜೆಪಿ ಉಸ್ತುವಾರಿ ವಹಿಸಿರುವ ಅರುಣ್ ಜೇಟ್ಲಿ ಆಗಮಿಸಲಿರುವುದರಿಂದ ನಾಳೆಯೊಳಗೆ ಅಂತಿಮ ಪಟ್ಟಿ ಹೊರಬರಬೇಕಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಟಿಕೆಟ್ ಹಂಚಿಕೆ ಕುರಿತು ಇಂದಿನ ಮಹತ್ವದ ಸಭೆ ಮುಂದುವರೆದಿದೆ.
ಮತ್ತಷ್ಟು
ಹಿಂಸಾತ್ಮಕ ಪ್ರತಿಭಟನೆ ಬೇಡ: ಕಲಾವಿದರ ಮನವಿ
ಹೊಗೇನಕಲ್ : ಕನ್ನಡ ಚಿತ್ರರಂಗದ ಪ್ರತಿಭಟನೆ
ಸಿದ್ದು-ಮಹದೇವ್ ಮುಖಾಮುಖಿ!
ಯೋಜನೆಗೆ ಅಸ್ತು ಎಂದಿದ್ದು ಬಿಜೆಪಿ-ಜೆಡಿಎಸ್: ಪೂಜಾರಿ
ಕ್ಯಾಂಟರ್ ಡಿಕ್ಕಿ : ಒಬ್ಬನ ಸಾವು,13ಮಂದಿಗೆ ಗಾಯ
ಅದ್ನಾನ್‌ಗಾಗಿ ಇಂದೂರ್‌ಗೆ ತೆರಳಿದ ಸಿಓಡಿ ತಂಡ