ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರದ ಹೊಗೆ: ನಿಲ್ಲದ ಪ್ರತಿಭಟನೆ
ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಹೇಳಿಕೆಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಮುಂದುವರೆದಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕರುಣಾನಿಧಿಯವರ ಪ್ರತಿಕೃತಿಗಳನ್ನು ದಹನ ಮಾಡಿದ್ದಾರೆ. ಅಲ್ಲದೆ, ತಮಿಳು ಸಿನಿಮಾದ ರೀಲುಗಳಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ.

ಒಂದು ಕಡೆ ಜಯಕರ್ನಾಟಕ ಹಾಗೂ ಕೇಬಲ್ ಆಪರೇಟರ್ಗಳ ಸಂಘಟನೆ ಹೊಗೇನಕಲ್ ಚಲೋ ರ್ಯಾಲಿ ಮುಂದುವರೆಸಿದ್ದರೆ, ಇತ್ತ ಕನ್ನಡ ಚಿತ್ರರಂಗವು ಪುರಭವನದಲ್ಲಿ ಸತ್ಯಾಗ್ರಹ ನಡೆಸಿತು. ಹೊಗೆಯ ಕಿಚ್ಚು ಮಂಡ್ಯ, ರಾಮನಗರ, ಹಾಸನ, ಬಿಜಾಪುರ ಸೇರಿದಂತೆ ಹಲವು ಭಾಗಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಎಂ. ಕರುಣಾನಿಧಿ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಕೃತಿಗಳನ್ನು ದಹಿಸಿರುವ ಬಗ್ಗೆ ವರದಿ ಬಂದಿದೆ.

ರಾಜಕೀಯ ಪಕ್ಷಗಳ ಖಂಡನೆ

ಈ ಮಧ್ಯೆ ರಾಜಕೀಯ ಪಕ್ಷಗಳು ಕುಡಿಯುವ ನೀರಿನ ಯೋಜನೆಯ ಕುರಿತು ಎಂ. ಕರುಣಾನಿಧಿ ಹೇಳಿಕೆಯನ್ನು ಖಂಡಿಸಿದ್ದು, ಸೌಹಾರ್ದಯುತವಾಗಿ ಬಗೆಹರಿಸಬೇಕೆಂದು ತಿಳಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಎರಡು ರಾಜ್ಯಗಳ ಹಿತ ಕಾಪಾಡುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಮಾಜಿ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಸೂಕ್ಷ್ಮ ಹಾಗೂ ಭಾವನಾತ್ಮಕ ಸಂಬಂಧವಾಗಿರುವುದರಿಂದ ತಮಿಳುನಾಡು ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಇತ್ತ ಅಖಿಲ ಕರ್ನಾಟಕ ಗಡಿ ಹೋರಾಟ ಸಮಿತಿ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಶಾಸಕರ ಭವನದಿಂದ ಎಮ್ಮೆ ಮೆರವಣಿಗೆ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಮತ್ತಷ್ಟು
ಪ್ರಾದೇಶಿಕ ಪಕ್ಷಗಳಿಂದ ಏಳಿಗೆ ಸಾಧ್ಯ: ಕುಮಾರಸ್ವಾಮಿ
ಇತಿಹಾಸದ ಪ್ರಜ್ಞೆ ಇಲ್ಲದ ಪೂಜಾರಿ ಹೇಳಿಕೆ: ಬಿಜೆಪಿ
ಹಿಂಸಾತ್ಮಕ ಪ್ರತಿಭಟನೆ ಬೇಡ: ಕಲಾವಿದರ ಮನವಿ
ಹೊಗೇನಕಲ್ : ಕನ್ನಡ ಚಿತ್ರರಂಗದ ಪ್ರತಿಭಟನೆ
ಸಿದ್ದು-ಮಹದೇವ್ ಮುಖಾಮುಖಿ!
ಯೋಜನೆಗೆ ಅಸ್ತು ಎಂದಿದ್ದು ಬಿಜೆಪಿ-ಜೆಡಿಎಸ್: ಪೂಜಾರಿ