ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿಷ್ಠಾವಂತರಿಗೆ ಚುನಾವಣೆಯಲ್ಲಿ ಆದ್ಯತೆ :ಟೈಟ್ಲರ್
ಭೂ ಮಾಫಿಯಾ, ರಿಯಲ್ ಎಸ್ಟೇಟ್ ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ಬದಿಗಿಟ್ಟು, ನಿಷ್ಠಾವಂತರಿಗಷ್ಟೇ ಮುಂದಿನ ಚುನಾವಣೆಯಲ್ಲಿ ಆದ್ಯತೆ ಎಂದು ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿರುವ ಜಗದೀಶ್ ಟೈಟ್ಲರ್ ತಿಳಿಸಿದ್ದಾರೆ.

ರಾಜ್ಯ ಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷದ ಜೊತೆ ಸಮಾಲೋಚನೆ ನಡೆಸಲು ರಾಜ್ಯಕ್ಕೆ ಆಗಮಿಸಿದ್ದ ಅವರು, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾರ್ಯಕರ್ತರ ಸಭೆ ನಡೆಸಿ ಅವರಿಂದ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಭೂ ಮಾಫಿಯದಲ್ಲಿ ತೊಡಗಿರುವವರನ್ನು ನಿಯಂತ್ರಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಅಂತಹ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗುವುದು ಎಂದ ಅವರು, ಈ ಬಗ್ಗೆ ನಿಷ್ಠಾವಂತ ಕಾರ್ಯಕರ್ತರು ನಿರಾಶರಾಗುವುದು ಬೇಡ ಎಂದು ತಿಳಿಸಿದರು. ಇದಕ್ಕೂ ಮೊದಲು ಪಕ್ಷದ ಪರವಾಗಿ ಚುನಾವಣೆಯಲ್ಲಿ ನಿಂತು, ಗೆದ್ದ ಬಳಿಕ ಪಕ್ಷಕ್ಕೆ ಪೂರಕವಾದ ಕೆಲಸ ಮಾಡದೆ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಮುಂದಾಗುತ್ತಾರೆ ಎಂದು ನಗರದ ಕೆಲ ಕಾಂಗ್ರೆಸ್ ಮುಖಂಡರ ವಿರುದ್ಧ ಕಾರ್ಯಕರ್ತರು ದೂರಿದರು.

ಇದನ್ನು ಆಲಿಸಿದ ಜಗದೀಶ್ ಟೈಟ್ಲರ್, ಕಾರ್ಯಕರ್ತರಿಗೆ ಭರವಸೆ ನೀಡಿ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಶೀಘ್ರದಲ್ಲಿಯೇ ಬಗೆಹರಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ರಾಹುಲ್ ಪ್ರವಾಸದ ಕುರಿತು ಮಾತನಾಡಿದ ಅವರು, ರಾಹುಲ್ ಭೇಟಿಯಿಂದ ರಾಜ್ಯದ ಯುವಕರಲ್ಲಿ ಹೊಸ ಚೈತನ್ಯ ಮೂಡಿದೆ. ಮುಂದಿನ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು.
ಮತ್ತಷ್ಟು
ಆರದ ಹೊಗೆ: ನಿಲ್ಲದ ಪ್ರತಿಭಟನೆ
ಪ್ರಾದೇಶಿಕ ಪಕ್ಷಗಳಿಂದ ಏಳಿಗೆ ಸಾಧ್ಯ: ಕುಮಾರಸ್ವಾಮಿ
ಇತಿಹಾಸದ ಪ್ರಜ್ಞೆ ಇಲ್ಲದ ಪೂಜಾರಿ ಹೇಳಿಕೆ: ಬಿಜೆಪಿ
ಹಿಂಸಾತ್ಮಕ ಪ್ರತಿಭಟನೆ ಬೇಡ: ಕಲಾವಿದರ ಮನವಿ
ಹೊಗೇನಕಲ್ : ಕನ್ನಡ ಚಿತ್ರರಂಗದ ಪ್ರತಿಭಟನೆ
ಸಿದ್ದು-ಮಹದೇವ್ ಮುಖಾಮುಖಿ!