ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಧ್ಯಮದವರ ಮೇಲೆ ಜೆಡಿಎಸ್ ಹಲ್ಲೆ
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಪ್ರತಿಭಟನೆ
ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಸೀರೆ ಹಂಚುತ್ತಿದ್ದಾಗ ಅದನ್ನು ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಶನಿವಾರ ನಡೆದಿದೆ.

ಈ ಘಟನೆಯಿಂದ ಕೆಲವು ಪತ್ರಕರ್ತರು ಗಾಯಗೊಂಡಿದ್ದು, ಖಾಸಗಿ ಚಾನಲ್ ಒಂದರ ಕ್ಯಾಮರಾ ಜಖಂಗೊಂಡಿದೆ. ಅಲ್ಲದೆ, ಕೆಲವು ವರದಿಗಾರರನ್ನು ಕೋಣೆಯೊಂದಕ್ಕೆ ಎಳೆದೊಯ್ದ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪತ್ರಕರ್ತರ ಮೇಲಿನ ಈ ಹಲ್ಲೆಯನ್ನು ಖಂಡಿಸಿರುವ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಮಹೇಶ್ ಅವರ ಮನೆಯ ಎದುರು ಪ್ರತಿಭಟನೆಗೆ ನಡೆಸಿದ್ದಾರೆ. ಅಲ್ಲದೆ, ಹಲ್ಲೆಯನ್ನು ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಪತ್ರಕರ್ತರ ಮೇಲೆ ಜೆಡಿಎಸ್ ಇದು ಎರಡನೇ ಬಾರಿಗೆ ನಡೆಸುತ್ತಿರುವ ಹಲ್ಲೆಯಾಗಿದೆ.

ವಿಧಾನಸಭಾ ಚುನಾವಣೆಯ ಕಣಕ್ಕೆ ಇಳಿದಿರುವ ರಾಜಕೀಯ ಪಕ್ಷಗಳು ಮತದಾರರನ್ನು ಒಲೈಸಲು ಅನೇಕ ದಾರಿಗಳನ್ನು ಹುಡುಕುತ್ತಿವೆ. ಇದಕ್ಕೆ ಜೆಡಿಎಸ್ ಕೂಡ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ ಕೆ.ಆರ್. ನಗರದ ವಿಧಾನಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಸಾ.ರಾ. ಮಹೇಶ್ ಅವರ ಮನೆ ಸಮೀಪದ ಖಾಲಿ ನಿವೇಶನದಲ್ಲಿ ಶೆಡ್ ನಿರ್ಮಿಸಿ ಸೀರೆ ಹಂಚಲಾಗುತ್ತಿತ್ತು. ಇದನ್ನು ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಏಕಾಏಕಿ ಜೆಡಿಎಸ್ ಕಾರ್ಯಕರ್ತರು ದಾಳಿ ನಡೆಸಿದರು.
ಮತ್ತಷ್ಟು
ರಾಜ್ಯ ಬಂದ್ ರದ್ದುಗೊಳಿಸಲು ನಿರ್ಧಾರ
ಹೊಟೇಲು ಉದ್ಯಮಿಗಳ ಬೃಹತ್ ಪ್ರತಿಭಟನೆ
ವಲಸಿಗ ಕಾಂಗ್ರೆಸಿಗರಿಂದ ನೊಂದ 'ಬೆಂಕಿ' ಬಿಜೆಪಿಗೆ
ಏಪ್ರಿಲ್ 8ರಂದು ಚುನಾವಣಾ ತರಬೇತಿ
ಕಾಂಗ್ರೆಸ್- ಜೆಡಿಎಸ್ ಸಭೆಗಳಲ್ಲಿ ಕಾರ್ಯಕರ್ತರ ಆಕ್ರೋಶ
ನಿಷ್ಠಾವಂತರಿಗೆ ಚುನಾವಣೆಯಲ್ಲಿ ಆದ್ಯತೆ :ಟೈಟ್ಲರ್