ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರುಣಾನಿಧಿ ನಿರ್ಧಾರಕ್ಕೆ ಬಿಜೆಪಿ ಸ್ವಾಗತ
PTI
ವಿವಾದಿತ ಹೊಗೇನಕಲ್ ಯೋಜನೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿರುವ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದ್ದಾರೆ.

ಹೊಗೇನಕಲ್ ಪ್ರದೇಶದಲ್ಲಿ ಕರ್ನಾಟಕ ರಾಜ್ಯದ ಹಿತಾಸಕ್ತಿಯನ್ನು ಬದಿಗೊತ್ತಿ ಅಕ್ರಮವಾಗಿ ಯೋಜನೆಯನ್ನು ಕೈಗೊಳ್ಳುವುದು ಸರಿಯಲ್ಲ. ಈ ಕುರಿತು ಕರುಣಾನಿಧಿಯವರ ಹೇಳಿಕೆ ಸೂಕ್ತವಾಗಿದೆ ಎಂದು ಯಡಿಯೂರಪ್ಪ ನುಡಿದರು.

ಹೊಗೇನಕಲ್ ಯೋಜನೆಗೆ ಎನ್‌ಡಿಎ ಸರಕಾರವೇ ಒಪ್ಪಿಗೆ ನೀಡಿತ್ತು ಎಂಬ ಹೇಳಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ ಅವರು, ಈ ಬಗ್ಗೆ ಯಾವ ಸರಕಾರ ಅನುಮೋದನೆ ನೀಡಿತ್ತು ಎಂಬುದು ತಮಗೆ ತಿಳಿದಿಲ್ಲ. ಆದರೆ ಕರುಣಾನಿಧಿ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.

ಹೊಗೇನಕಲ್ ಯೋಜನೆ ಕುರಿತು ಖ್ಯಾತ ನಟ ರಜನಿಕಾಂತ್ ಹೇಳಿಕೆ ಕುರಿತು ಮಾತನಾಡಿದ ಅವರು, ರಜನಿಕಾಂತ್ ಹೇಳಿಕೆಯಿಂದ ತಮಗೇನು ಬೇಸರವಾಗಿಲ್ಲ. ಸ್ವಭಾವತಃ ಒಳ್ಳೆಯ ಮನಸ್ಸಿನ ವ್ಯಕ್ತಿಯಾಗಿರುವ ಅವರು, ತಮಿಳುನಾಡಿನ ಹಿತದೃಷ್ಟಿಯಿಂದ ಕೆಲವೊಮ್ಮೆ ಟೀಕೆ ಮಾಡುವುದು ಸಹಜ. ಆದರೆ ರಜನಿ ಈ ಸಂದರ್ಭದಲ್ಲಿ ವಸ್ತುಸ್ಥಿತಿಯನ್ನು ಅರಿತುಕೊಳ್ಳಬೇಕಿತ್ತು ಎಂದು ಅಭಿಪ್ರಾಯಿಸಿದರು.
ಮತ್ತಷ್ಟು
ರಜನಿ ಸಿನಿಮಾಗಳ ಬಹಿಷ್ಕಾರಕ್ಕೆ ಕರೆ
ಬಿಜೆಪಿಗೆ ಅಧಿಕಾರ: ಅರುಣ್ ಜೇಟ್ಲಿ ವಿಶ್ವಾಸ
ಶಂಕಿತ ಉಗ್ರ ಸಬಾವುದ್ದೀನ್ ನಗರಕ್ಕೆ
ಮಾಧ್ಯಮದವರ ಮೇಲೆ ಜೆಡಿಎಸ್ ಹಲ್ಲೆ
ರಾಜ್ಯ ಬಂದ್ ರದ್ದುಗೊಳಿಸಲು ನಿರ್ಧಾರ
ಹೊಟೇಲು ಉದ್ಯಮಿಗಳ ಬೃಹತ್ ಪ್ರತಿಭಟನೆ