ರಾಜ್ಯ ವಿಧಾನಸಭೆಗೆ ಈಗಾಗಲೇ ರಣಕಹಳೆಯನ್ನು ಚುನಾವಣಾ ಆಯೋಗ ಮೊಳಗಿಸಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗದ ಮುಂದಿರುವ ಕೆಲಸ ಕಾರ್ಯಗಳ ಕುರಿತು ಪರೀಶೀಲಿಸಲು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಚುನಾವಣಾ ಆಯೋಗ ಕೆಲವೊಂದು ನೀತಿ ನಿಯಮಗಳನ್ನು ಪಾಲಿಸಲು ನಿರ್ಧರಿಸಿದೆ.
ನಕಲಿ ಮತದಾನ ತಡೆಯುವುದಕ್ಕಾಗಿ ಒಂದು ಹಂತದ ಮತದಾನ ಮುಗಿದ ಬಳಿಕ ಇನ್ನೊಂದು ಹಂತಕ್ಕೆ ರಾಜಕೀಯ ಪಕ್ಷಗಳ ನಾಯಕರನ್ನು ಹೊರತುಪಡಿಸಿ, ಪಕ್ಷದ ಕಾರ್ಯಕರ್ತರು ವಲಸೆ ಹೋಗುವುದನ್ನು ತಡೆಗಟ್ಟಲು ಎಲ್ಲಾ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಅಲ್ಲದೆ, ಚುನಾವಣಾ ಸಂದರ್ಭದಲ್ಲಿ ನೆರೆಹೊರೆ ರಾಜ್ಯಗಳಿಂದ ಅಕ್ರಮವಾಗಿ ರಾಜ್ಯಕ್ಕೆ ವಲಸೆ ಬರುವುದು ಹಾಗೂ ಮತದಾರರನ್ನು ಒಲೈಸಲು ಅಕ್ರಮವಾಗಿ ಮದ್ಯ ಸರಬರಾಜು ಮಾಡುವುದರ ಬಗ್ಗೆಯೂ ಗಮನಹರಿಸುವಂತೆ ನೆರೆರಾಜ್ಯಗಳ ಗೃಹ ಇಲಾಖೆಗೆ ಆಯೋಗ ಸೂಚನೆ ನೀಡಿದೆ.
ಈ ಮಧ್ಯೆ, ರಾಜಕೀಯ ಪಕ್ಷಗಳಿಗೂ ಕೆಲವೊಂದು ಸೂಚನೆಗಳನ್ನು ಆಯೋಗ ನೀಡಿದೆ. ಚುನಾವಣೆ ಪ್ರಚಾರಕ್ಕೆ ಪ್ಲಾಸ್ಟಿಕ್‌ಗ ಳನ್ನು ಬಳಸುವಂತಿಲ್ಲ. ಬಂಟಿಂಗ್ಸ್, ಬ್ಯಾನರ್‌ಗಳು ಸಮಾವೇಶಕ್ಕೆ ಮಾತ್ರ ಸೀಮಿತವಾಗಿರಬೇಕು ಎಂಬಂತಹ ನಿಯಮಗಳನ್ನು ಚುನಾವಣಾ ಆಯೋಗ ನೀಡಿದೆ.
|