ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯಾದ್ಯಂತ ಕಾಂಗ್ರೆಸ್ ಸಮಾವೇಶ
ರಾಜ್ಯ ಚುನಾವಣೆಗೆ ತಡವಾಗಿಯಾದರೂ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಕಳೆದ ಒಂದು ವಾರದಿಂದ ಮತದಾರರ ಒಲೈಕೆ ಕುರಿತು ಬಿಸಿ ಬಿಸಿ ಚರ್ಚೆ ನಡೆಸುತ್ತಲೇ ಇದೆ. ಕೆಲವೊಂದು ಅಪಸ್ವರಗಳ ನಡುವೆಯೂ ಗಡಿಬಿಡಿಯಲ್ಲಿ ಕಾಂಗ್ರೆಸ್ ನಾಲ್ಕು ಸಮಿತಿಗಳನ್ನು ರಚಿಸಿದೆ. ಈಗ ರಾಜ್ಯದ ಮಧ್ಯಭಾಗವಾದ ದಾವಣಗೆರೆಯಿಂದ ಏಪ್ರಿಲ್ 13ರಂದು ರೈತರ ಸಮಾವೇಶದ ಮೂಲಕ ಚುನಾವಣಾ ಪ್ರಚಾರ ಸಮರಕ್ಕೆ ಕಾಂಗ್ರೆಸ್ ಅಧಿಕೃತವಾಗಿ ಹೆಜ್ಜೆ ಹಾಕಲಿದೆ.

ಈ ಸಮಾವೇಶದ ಬಳಿಕ ಪ್ರತಿ ಎರಡು ದಿನಕ್ಕೊಂದರಂತೆ 3 ಸಮಾವೇಶಗಳನ್ನು ಪಕ್ಷ ಆಯೋಜಿಸಿದೆ. ಈ ಎಲ್ಲಾ ಸಮಾವೇಶದಲ್ಲಿ ಪಕ್ಷದ ಹಿರಿಯ ನಾಯಕರಾದ ಎಸ್.ಎಂ. ಕೃಷ್ಣ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಾಫರ್ ಷರೀಫ್, ರಾಜ್ಯ ಉಸ್ತುವಾರಿ ವಹಿಸಿರುವ ಪೃಥ್ವಿರಾಜ್ ಚೌಹಾಣ್ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ರೈತರನ್ನು ದೃಷ್ಟಿಯಾಗಿಟ್ಟುಕೊಂಡು ಪ್ರಚಾರಕ್ಕೆ ಧುಮುಕಿರುವ ಕಾಂಗ್ರೆಸ್, ಅಧಿಕಾರಕ್ಕೆ ಬಂದರೆ ರೈತರ ಸಮಸ್ಯೆಗಳನ್ನು ಬಗೆಹರಿಸಲು ಕೈಗೊಳ್ಳಬೇಕಾದ ಯೋಜನೆಗಳ ಕುರಿತು ರೈತ ಸಮಾವೇಶದಲ್ಲಿ ಚರ್ಚೆ ನಡೆಸಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ, ಏಪ್ರಿಲ್ 13ರ ಬಳಿಕ ಏಪ್ರಿಲ್ 15ರಂದು ಮಂಡ್ಯದಲ್ಲಿ ಮಹಿಳೆಯರ ಸಮಾವೇಶ, 17ರಂದು ಕೋಲಾರದಲ್ಲಿ ಸಾಮಾಜಿಕ ನ್ಯಾಯ ಸಮಾವೇಶ ಮತ್ತು ಗುಲ್ವರ್ಗಾದಲ್ಲಿ ಇದೇ ತಿಂಗಳ 19ರಂದು ಧಾರ್ಮಿಕ ಅಲ್ಪಸಂಖ್ಯಾತರ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.
ಮತ್ತಷ್ಟು
ನಕಲಿ ಮತದಾನ ತಡೆಗೆ ಕಟ್ಟುನಿಟ್ಟಿನ ಕ್ರಮ
ಕರುಣಾನಿಧಿ ನಿರ್ಧಾರಕ್ಕೆ ಬಿಜೆಪಿ ಸ್ವಾಗತ
ರಜನಿ ಸಿನಿಮಾಗಳ ಬಹಿಷ್ಕಾರಕ್ಕೆ ಕರೆ
ಬಿಜೆಪಿಗೆ ಅಧಿಕಾರ: ಅರುಣ್ ಜೇಟ್ಲಿ ವಿಶ್ವಾಸ
ಶಂಕಿತ ಉಗ್ರ ಸಬಾವುದ್ದೀನ್ ನಗರಕ್ಕೆ
ಮಾಧ್ಯಮದವರ ಮೇಲೆ ಜೆಡಿಎಸ್ ಹಲ್ಲೆ