ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡಿಗರಿಗೆ ಒದೆಯಿರಿ ಎಂಬ ಅವಿವೇಕಿ ತಾನಲ್ಲ: ರಜನಿ
ರಜನಿ ಕ್ಷಮೆ ಕೇಳುವವರೆಗೆ ಬಿಡಲ್ಲ: ಕರವೇ
WDWD
ಕನ್ನಡಿಗರಿಗೆ ಒದೆಯಿರಿ ಎಂದು ಹೇಳುವಷ್ಟು ಅವಿವೇಕಿ ತಾನಲ್ಲ, ತನ್ನ ಮಾತಿನಿಂದ ಕನ್ನಡಿಗರಿಗೆ ಅವಮಾನವಾಗಿದೆ ಎಂದು ಕನ್ನಡ ನಾಡಿನ ಗಣ್ಯರು ತಿಳಿಸಿದರೆ ಕ್ಷಮೆ ಕೋರಲು ಸಿದ್ದ ಎಂದು ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ್ದಾರೆ.

ಕನ್ನಡಿಗರ ಆಕ್ರೋಶವನ್ನು ತಳ್ಳಿಹಾಕಿರುವ ರಜನಿಕಾಂತ್, "ಕನ್ನಡಿಗರಿಗೆ ಒದೆಯಿರಿ ಎಂದು ಹೇಳುವಷ್ಟು ಅವಿವೇಕಿ ನಾನಲ್ಲ. ಸಣ್ಣಪುಟ್ಟ ವಿಚಾರಗಳಿಗೆ ಬಸ್‌ಗೆ ಬೆಂಕಿ ಇಟ್ಟು ಹಾನಿ ಸೃಷ್ಟಿಸುವ ವಿಷಕ್ರಿಮಿಗಳಿಗೆ ಒದೆಯಬೇಡವೇ? ಎಂದಿದ್ದು ಸತ್ಯ. ಆದರೆ ಅದನ್ನೇ ತಪ್ಪಾಗಿ ಗ್ರಹಿಸಿ ಪ್ರಚಾರ ಮಾಡಲಾಗುತ್ತಿದೆ. ನನ್ನ ಮಾತಿನಿಂದ ಅವಮಾನವಾಗಿದೆ ಎಂದು ಕನ್ನಡದ ಹಿರಿಯ ಗಣ್ಯರಾದ ಪಾರ್ವತಮ್ಮ ರಾಜ್ಕುಮಾರ್, ಗೀರೀಶ್ ಕಾರ್ನಾಡ್, ಅಶ್ವತ್ಥರಂತಹವರು ತಿಳಿಸಿದರೆ, ಖಂಡಿತ ಕನ್ನಡಿಗರಲ್ಲಿ ಕ್ಷಮೆ ಯಾಚಿಸುತ್ತೇನೆ" ಎಂದು ತಿಳಿಸಿದ್ದಾರೆ.

ಕನ್ನಡಿಗರು ತಮ್ಮ ಚಿತ್ರಕ್ಕೆ ಬಹಿಷ್ಕಾರ ಹಾಕಿರುವ ಕುರಿತು ಮಾತನಾಡಿದ ರಜನಿ, ಕರ್ನಾಟಕದಲ್ಲಿ ತಮಿಳರಿಗಿಂತ ಹೆಚ್ಚು ಕನ್ನಡಿಗರೇ ತನ್ನ ಚಿತ್ರವನ್ನು ಇಷ್ಟ ಪಡುತ್ತಾರೆ. ಇದರಿಂದ ಅವರಿಗೇ ನಷ್ಟ ಎಂದು ಅಭಿಪ್ರಾಯಿಸಿದ್ದಾರೆ.

ರಜನಿಕಾಂತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ರಜನೀಕಾಂತ್ ಕನ್ನಡಿಗರಲ್ಲಿ ಕ್ಷಮೆ ಕೇಳುವವರೆಗೂ ಕನ್ನಡದ ನೆಲದೊಳಗೆ ಪ್ರವೇಶಿಸಲು ಬಿಡುವುದಿಲ್ಲ. ಹಾಗೆಯೇ ಅವರ ಯಾವುದೇ ಚಿತ್ರದ ಚಿತ್ರೀಕರಣ ಹಾಗೂ ಪ್ರದರ್ಶನಕ್ಕೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು
ಯುಗಾದಿಗಾಗಿ ನಗೆ ಉತ್ಸವ
ಸಬಾವುದ್ದೀನ್ ಬಂಧನ: ಹೆಚ್ಚಿನ ಮಾಹಿತಿ ಬಹಿರಂಗ
ಗೋಪಾಲ್ ಕಾಂಗ್ರೆಸ್‌ಗೆ ಸೇರ್ಪಡೆ
ರಾಜ್ಯಾದ್ಯಂತ ಕಾಂಗ್ರೆಸ್ ಸಮಾವೇಶ
ನಕಲಿ ಮತದಾನ ತಡೆಗೆ ಕಟ್ಟುನಿಟ್ಟಿನ ಕ್ರಮ
ಕರುಣಾನಿಧಿ ನಿರ್ಧಾರಕ್ಕೆ ಬಿಜೆಪಿ ಸ್ವಾಗತ