ಹೊಗೇನಕಲ್ ವಿವಾದದ ಸಂಬಂಧ ರಾಜ್ಯಕ್ಕಾಗಿರುವ ಅನ್ಯಾಯದ ವಿರುದ್ಧ ಸಹಿ ಸಂಗ್ರಹ ಅಭಿಯಾನ 'ನ್ಯಾಯಯಾತ್ರೆ'ಯನ್ನು ಚುನಾವಣೆ ಮುಗಿದ ಬಳಿಕ ಆರಂಭಿಸುವುದಾಗಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ತಿಳಿಸಿದ್ದಾರೆ.
ಪ್ರತಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಸಹಿ ಸಂಗ್ರಹದ ಬಳಿಕ ರಾಜ್ಯದ ಪ್ರಮುಖ ಮುಖಂಡರ ನಿಯೋಗವನ್ನು ರಾಷ್ಟ್ರಪತಿ ಬಳಿ ಕರೆದೊಯ್ದು ವಿವಾದದ ಪರಿಹಾರಕ್ಕೆ ಶ್ರಮಿಸುವುದಾಗಿ ತಿಳಿಸಿದ ಅವರು, ಉಭಯ ರಾಜ್ಯಗಳಿಗೂ ಸಹಕಾರಿಯಾಗುವಂತಹ ಕುಡಿಯುವ ನೀರಿನ ಯೋಜನೆಯನ್ನು ರೂಪಿಬೇಕೆಂದು ತಾವು ಪ್ರಧಾನಿಯಾಗಿದ್ದಾಗ ಸಲಹೆ ನೀಡಿದ್ದರೂ, ತಮಿಳುನಾಡು ಸರ್ಕಾರ ಒಪ್ಪಿಕೊಂಡಿರಲಿಲ್ಲ. ಕಾಂಗ್ರೆಸ್ ಹಾಗೂ ತಮಿಳುನಾಡು ಸರ್ಕಾರ ಜೊತೆಯಾಗಿ ಈ ಪ್ರಹಸನವನ್ನು ಆಡಿದೆ ಎಂದು ಟೀಕಿಸಿದರು.
ಮಾಧ್ಯಮಗಳ ಮೇಲಿನ ಹಲ್ಲೆಗೆ ವಿಷಾದ:
ಮೈಸೂರಿನಲ್ಲಿ ಮಾಧ್ಯಮಗಳ ಮೇಲೆ ಜೆಡಿಎಸ್ ಕಾರ್ಯಕರ್ತರು ನಡೆಸಿರುವ ಹಲ್ಲೆ ನನ್ನ ಗಮನಕ್ಕೆ ಬಂದಿರಲಿಲ್ಲ. ಆದರೆ ಇದಕ್ಕಾಗಿ ನಾನು ವಿಷಾಧಿಸುತ್ತೇನೆ ಎಂದು ದೇವೇಗೌಡರು ಈ ಸಂದರ್ಭದಲ್ಲಿ ಹೇಳಿದರು.
ಮೈಸೂರಿನ ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಿರಾ ಎಂಬ ಪ್ರಶ್ನೆಗೆ ಉತ್ತರ ನೀಡದೆ ನುಣುಚಿಕೊಂಡರು.
|