ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟ್ಯಾಕ್ಸಿ ಸೇವೆ ಮುಂಬೈ ಸಂಸ್ಥೆಗೆ: ಕರವೇ ಪ್ರತಿಭಟನೆ
ದೇವನಹಳ್ಳಿ ಬೆಂಗಳೂರು ವಿಮಾನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಸೇವೆಯನ್ನು ಮುಂಬೈ ಮೂಲದ ವಿ-ಲಿಂಕ್ ಟ್ಯಾಕ್ಸಿ ಸಂಸ್ಥೆಗೆ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಿನ್ನೆ ರಾತ್ರಿ ಖಾಸಗಿ ಹೊಟೇಲ್ ಒಂದರಲ್ಲಿ ಆಯೋಜಿಸಿದ್ದ ಟ್ಯಾಕ್ಸಿ ಸೇವೆಯ ಉದ್ಘಾಟನಾ ಸಮಾರಂಭಕ್ಕೆ ನುಗ್ಗಿ ದಾಂಧಲೆ ನಡೆಸಿದರು.

ಟ್ಯಾಕ್ಸಿ ಸೇವೆಗಾಗಿ ಕನ್ನಡಿಗರನ್ನು ಕಡೆಗೆಣಿಸಲಾಗಿದೆ ಎಂದು ಸುಮಾರು 40ಕ್ಕೂ ಹೆಚ್ಚು ಕರವೇ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ವೇದಿಕೆ ಮತ್ತು ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಇದರಿಂದ ಕಾರ್ಯಕ್ರಮ ಆಯೋಜಕರು ಹಾಗೂ ಸಭಿಕರಲ್ಲಿ ಕೆಲಹೊತ್ತು ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.

ವಿಮಾನ ನಿಲ್ದಾಣದ ಚಾಲಕರ ಸೇವೆಯನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮಕ್ಕೆ (ಕೆಎಸ್‌ಟಿಡಿಸಿ) ನೀಡಬೇಕೆಂದು ಆಗ್ರಹಿಸಿದ ಕರವೇ ಕಾರ್ಯಕರ್ತರು ಈಗಾಗಲೇ ಕೆಎಸ್‌ಟಿಡಿಸಿಯಲ್ಲಿ ಸುಮಾರು 700ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಟ್ಯಾಕ್ಸಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಟ್ಯಾಕ್ಸಿ ಸೇವೆಯನ್ನು ಒದಗಿಸಬೇಕೆಂದು ಆಗ್ರಹಿಸಿದರು.

ಈಗಾಗಲೇ ವಿ-ಲಿಂಕ್ ಟ್ಯಾಕ್ಸಿ ಸಂಸ್ಥೆ ಕನ್ನಡಿಗರಿಗೆ ಟ್ಯಾಕ್ಸಿ ಸೇವೆಯನ್ನು ಒದಗಿಸುವುದಾಗಿ ಭರವಸೆ ನೀಡಿತ್ತು. ಆದರೆ ಈಗ ಉತ್ತರ ಭಾರತದವರನ್ನು ನೇಮಕ ಮಾಡಿಕೊಂಡಿದೆ. ಈ ನಿರ್ಣಯವನ್ನು ಕೂಡಲೇ ಹಿಂದಕ್ಕೆ ಪಡೆದು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆಗೆ ಇಳಿಯುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಮತ್ತಷ್ಟು
ಹೊಗೆ ಶಮನ ಮಾಡಿದ್ದು ಸೋನಿಯಾ: ಮೊಯಿಲಿ
ರಜನಿ ಬಹಿಷ್ಕಾರದ ಬಿಸಿ ಮುಂದುವರಿಯುತ್ತಾ?
ಸಭಾವುದ್ದೀನ್ ಮಂಪರು ಪರೀಕ್ಷೆ
ದೇವಾಲಯದಲ್ಲಿ ಕಳವು: ಜೇವರ್ಗಿ ಪ್ರಕ್ಷುಬ್ಧ
ಶಸ್ತ್ರಾಸ್ತ್ರ ಶರಣಾಗತಿಗೆ ಜಿಲ್ಲಾಧಿಕಾರಿಗಳ ಆದೇಶ
ಬಿಜೆಪಿ ಟಿಕೆಟ್: ಏ.10ಕ್ಕೆ ಕನಿಷ್ಠ 10 ಮಂದಿಗೆ ನಿರಾಶೆ