ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಎಸ್ಪಿ: ರಾಜ್ಯದಲ್ಲಿ 20 ಬ್ರಾಹ್ಮಣ ಅಭ್ಯರ್ಥಿಗಳು
ತಮ್ಮದು ದಲಿತರ ಪಕ್ಷ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ತೀವ್ರವಾಗಿ ಯತ್ನಿಸುತ್ತಿರುವ ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಕರ್ನಾಟಕದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಳಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಬ್ರಾಹ್ಮಣರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ.

ಉತ್ತರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ದಲಿತ-ಬ್ರಾಹ್ಮಣರಿಗೆ ಆದ್ಯತೆ ನೀಡಿರುವುದು ಉತ್ತಮ ಫಲ ನೀಡಿರುವುದರಿಂದ ಪ್ರೇರಣೆಗೊಂಡಿರುವ ಬಿಎಸ್ಪಿ, ಕರ್ನಾಟಕದಲ್ಲೂ ಇದೇ ತಂತ್ರ ಅನುಸರಿಸಲು ಸಿದ್ಧವಾಗಿದ್ದು, ಬಿಎಸ್ಪಿ ನಾಯಕಿ ಮಾಯಾವತಿ ಬುಧವಾರ ನವದೆಹಲಿಯಲ್ಲಿ ಪಕ್ಷದ ಕರ್ನಾಟಕ ನಾಯಕರೊಂದಿಗೆ ಮಾತುಕತೆ ನಡೆಸಿ ಅಭ್ಯರ್ಥಿಗಳ ಪಟ್ಟಿ, ಚುನಾವಣಾ ತಂತ್ರ ಸಿದ್ಧಪಡಿಸಲಿದ್ದಾರೆ.

ಬ್ರಾಹ್ಮಣ ಸಮುದಾಯದಲ್ಲಿ ಇಷ್ಟೊಂದು ಮಂದಿಗೆ ಬೇರಾವುದೇ ಪಕ್ಷ ಟಿಕೆಟ್ ನೀಡುವುದಿಲ್ಲ. ದಲಿತರಂತೆಯೇ, ಬ್ರಾಹ್ಮಣರು ಕೂಡ ರಾಜಕೀಯ ಪಕ್ಷಗಳಿಂದ ಬೇಕಾದಾಗ ಬಳಸಿಕೊಂಡು ತುಳಿತಕ್ಕೊಳಗಾದವರು ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅವರು ಹಿಂದೂ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅವರ ಪ್ರಕಾರ, ಲಿಂಗಾಯತರು ಮತ್ತು ಒಕ್ಕಲಿಗರಿಗೆ ಶೇ.30 ಸೀಟುಗಳು, ಹಿಂದುಳಿದ ವರ್ಗಗಳಿಗೆ ಶೇ.37, ದಲಿತರಿಗೆ ಶೇ.23 ಹಾಗೂ ಮುಸ್ಲಿಮರಿಗೆ ಶೇ.12 ಸೀಟುಗಳನ್ನು ಮೀಸಲಿಡಲಿದೆ.

ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರು. 2004ರ ಚುನಾವಣೆಗಳಲ್ಲಿ ಬಿಎಸ್ಪಿಗೆ ಯಾವುದೇ ಸೀಟುಗಳು ಲಭ್ಯವಾಗದಿದ್ದರೂ, ಚುನಾವಣೆಯಲ್ಲಿ ತನ್ನ ಛಾಪು ಒತ್ತುವಲ್ಲಿ ಸಫಲವಾಗಿದ್ದು, ಹಲವು ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿತ್ತು.
ಮತ್ತಷ್ಟು
ಭ್ರಷ್ಟರ ಸದ್ದಡಗಿಸೋ ಪತಿಯನ್ನು ಅಮಾನತು ಮಾಡಿ!
ಟ್ಯಾಕ್ಸಿ ಸೇವೆ ಮುಂಬೈ ಸಂಸ್ಥೆಗೆ: ಕರವೇ ಪ್ರತಿಭಟನೆ
ಹೊಗೆ ಶಮನ ಮಾಡಿದ್ದು ಸೋನಿಯಾ: ಮೊಯಿಲಿ
ರಜನಿ ಬಹಿಷ್ಕಾರದ ಬಿಸಿ ಮುಂದುವರಿಯುತ್ತಾ?
ಸಭಾವುದ್ದೀನ್ ಮಂಪರು ಪರೀಕ್ಷೆ
ದೇವಾಲಯದಲ್ಲಿ ಕಳವು: ಜೇವರ್ಗಿ ಪ್ರಕ್ಷುಬ್ಧ