ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಟ್ಟಿ ಬಿಡುಗಡೆ ಸಿದ್ಧತೆಯಲ್ಲಿ ಪಕ್ಷಗಳು
ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೇಟ್ ನೀಡದಿರಲು ಬಿಜೆಪಿ ನಿರ್ಧರಿಸಿದೆ ಎಂದು ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ. ಗುರುವಾರ ಸಂಜೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದ ಚುನಾವಣೆಗಾಗಿ 160 ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಸಿದ್ಧಗೊಳಿಸಲಾಗಿದ್ದು, ಇಂದು ಸಂಜೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಜೊತೆಯಲ್ಲಿ ದೆಹಲಿಗೆ ತೆರಳಿ, ರಾಷ್ಟ್ರೀಯ ವರಿಷ್ಠರೊಂದಿಗೆ ಚರ್ಚಿಸಿದ ಬಳಿಕ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್
ಈ ಮಧ್ಯೆ ಕಾಂಗ್ರೆಸ್ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಈ ತಿಂಗಳ 16ರ ಒಳಗೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ ಅಂತಿಮ ಪಟ್ಟಿಯ ಸಿದ್ಧತೆಗಾಗಿ ಪಕ್ಷದ ನಾಯಕರಾದ ಪೃಥ್ವಿರಾಜ್ ಚೌಹಾಣ್, ಜಯರಾಂ ರಮೇಶ್, ವಯಲಾರ್ ರವಿ, ಕಪಿಲ್ ಸಿಬಾಲ್ ಮತ್ತಿತರು ಆಗಮಿಸಿದ್ದಾರೆ. ಅರ್ಜಿಯನ್ನು ಪರಿಶೀಲಿಸಿ ಗೆಲ್ಲುವ ಕುದುರೆಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಜೆಡಿಎಸ್
ಇನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಈ ತಿಂಗಳ 15ರಂದು ಪ್ರಕಟಿಸಲಾಗುವುದು ಎಂದು ಪಕ್ಷದ ವಕ್ತಾರ ವೈ.ಎಸ್.ವಿ. ದತ್ತಾ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಜೈತ್ರಯಾತ್ರೆ ಇದೇ ತಿಂಗಳ 12ಕ್ಕೆ ಪೂರ್ಣಗೊಳ್ಳಲಿದ್ದು, ಆ ಬಳಿಕ ಸಭೆ ನಡೆಸಿ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಮತ್ತಷ್ಟು
ಶೇ.33 ಸ್ಥಾನಕ್ಕೆ 'ಕಾಂಗ್ರೆಸಿಣಿ'ಯರ ಒತ್ತಾಯ
ಗೆಲ್ಲಬಲ್ಲವರಿಗಷ್ಟೇ ಕಾಂಗ್ರೆಸ್ ಟಿಕೆಟ್: ಕೃಷ್ಣ
ಬಿಎಸ್ಪಿ: ರಾಜ್ಯದಲ್ಲಿ 20 ಬ್ರಾಹ್ಮಣ ಅಭ್ಯರ್ಥಿಗಳು
ಭ್ರಷ್ಟರ ಸದ್ದಡಗಿಸೋ ಪತಿಯನ್ನು ಅಮಾನತು ಮಾಡಿ!
ಟ್ಯಾಕ್ಸಿ ಸೇವೆ ಮುಂಬೈ ಸಂಸ್ಥೆಗೆ: ಕರವೇ ಪ್ರತಿಭಟನೆ
ಹೊಗೆ ಶಮನ ಮಾಡಿದ್ದು ಸೋನಿಯಾ: ಮೊಯಿಲಿ