ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೈಕೋರ್ಟ್‌ಗೆ ತಲುಪಿದ 'ಮುಖ್ಯಮಂತ್ರಿ ಐ ಲವ್ ಯೂ'
ಬೆಂಗಳೂರು: ಪತ್ರಕರ್ತ ರವಿ ಬೆಳೆಗೆರೆ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರ 'ಮುಖ್ಯಮಂತ್ರಿ ಐ ಲವ್ ಯೂ'ಯು ಕುರಿತಂತೆ ಮಾಜಿ ಪ್ರಧಾನಿ ದೇವೇಗೌಡರು ತಗಾದೆ ತೆಗೆದಿರುವ ಹಿನ್ನೆಲೆಯಲ್ಲಿ ಪ್ರಕರಣವೀಗ ಹೈ ಕೋರ್ಟ್ ಮೆಟ್ಟಿಲೇರಿದೆ.

ಮುಖ್ಯಮಂತ್ರಿ ಐ ಲವ್ ಯೂ ಚಿತ್ರದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳನ್ನು ದಾಖಲಿಸಬಾರದು ಹಾಗೂ ಚಿತ್ರ ಬಿಡುಗಡೆಗೆ ಮುನ್ನ ಚಿತ್ರವನ್ನು ನ್ಯಾಯಾಲಯದಲ್ಲಿ ಪ್ರದರ್ಶಿಸಬೇಕೆಂದು ಜೆಎಂಎಫ್‌ಸಿ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ರವಿಬೆಳೆಗೆರೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಹಿನ್ನೆಲೆಯಲ್ಲಿ ರವಿ ಬೆಳೆಗೆರೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಚಿತ್ರದಲ್ಲಿ ದುನಿಯಾದ ವಿಜಯ್ ನಾಯಕನಾಗಿ ನಟಿಸುತ್ತಿದ್ದಾರೆ. ಇಲ್ಲಿ ಮುಖ್ಯಮಂತ್ರಿಯೊಬ್ಬನ ಅಕ್ರಮ ಸಂಬಂಧದ ಸುತ್ತ ಚಿತ್ರವನ್ನು ಹೆಣೆಯಲಾಗಿದೆ. ಆದರೆ ಈ ಚಿತ್ರದಲ್ಲಿನ ಅಂಶಗಳನ್ನು ತಮ್ಮ ಕುಟುಂಬವನ್ನು ಗುರಿಯಾಗಿರಿಸಿ ಸೇರಿಸಲಾಗಿದೆ ಎಂದು ದೇವೇಗೌಡರು ರವಿ ಬೆಳೆಗೆರೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಮತ್ತಷ್ಟು
ಕರಂದ್ಲಾಜೆಗೆ ಟಿಕೆಟ್: ಕಾರ್ಯಕರ್ತರ ಅಸಮಾಧಾನ
ಜೆಡಿಎಸ್ ವಿರೋಧಿ ಅಧಿಕಾರಿಗಳು ಮೈಸೂರಿಗೆ
ಕಾಂಗ್ರೆಸ್‌ಗೆ ಬಹುಮತ :ಖರ್ಗೆ ವಿಶ್ವಾಸ
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಅಂತಿಮ
ಪಟ್ಟಿ ಬಿಡುಗಡೆ ಸಿದ್ಧತೆಯಲ್ಲಿ ಪಕ್ಷಗಳು
ಶೇ.33 ಸ್ಥಾನಕ್ಕೆ 'ಕಾಂಗ್ರೆಸಿಣಿ'ಯರ ಒತ್ತಾಯ