ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊನೆಯಲ್ಲಿ ಪ್ರಣಾಳಿಕೆ ಬಿಡುಗಡೆ: ಜೆಡಿಎಸ್
ಬೆಂಗಳೂರು: ಎಲ್ಲರಿಗಿಂತ ಮೊದಲೇ ಪಕ್ಷದ ಪ್ರಣಾಳಿಕೆ ಪ್ರಕಟಿಸಿದರೆ ಅದರಲ್ಲಿನ ಕಾರ್ಯಕ್ರಮಗಳ ಪಟ್ಟಿಯನ್ನು ಇತರೆ ಪಕ್ಷಗಳು ನಕಲು ಮಾಡಬಹುದು ಎಂಬ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಕೊನೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿನ ಮುಖ್ಯ ವಿಷಯಗಳನ್ನು ಕಾಪಿ ಮಾಡಿದ್ದವು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಣಾಳಿಕೆ ಪ್ರಕಟಿಸಿದ ಬಳಿಕವಷ್ಟೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.

ರೈತರು, ಯುವಕರು, ದೀನ ದಲಿತರು, ನಿರ್ಗತಿಕರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರಿಗೆ ಅನುಕೂಲಕರವಾಗುವಂತಹ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗುತ್ತದೆ. ಅಲ್ಲದೆ, ಜನತೆಗೆ ಶೀಘ್ರವೇ ಕಾರ್ಯಕ್ರಮ ತಲುಪುವಂತೆ ಪ್ರಣಾಳಿಕೆಯಲ್ಲಿ ಅನುಷ್ಠಾನದ ಸಮಯವನ್ನೂ ನಿಗದಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಮತ್ತಷ್ಟು
ಶಿಸ್ತಿನಿಂದ ದುಡಿಯಿರಿ ಕಾರ್ಯಕರ್ತರಿಗೆ ಎಸ್ಸೆಂ ಕರೆ
ಹೈಕೋರ್ಟ್‌ಗೆ ತಲುಪಿದ 'ಮುಖ್ಯಮಂತ್ರಿ ಐ ಲವ್ ಯೂ'
ಕರಂದ್ಲಾಜೆಗೆ ಟಿಕೆಟ್: ಕಾರ್ಯಕರ್ತರ ಅಸಮಾಧಾನ
ಜೆಡಿಎಸ್ ವಿರೋಧಿ ಅಧಿಕಾರಿಗಳು ಮೈಸೂರಿಗೆ
ಕಾಂಗ್ರೆಸ್‌ಗೆ ಬಹುಮತ :ಖರ್ಗೆ ವಿಶ್ವಾಸ
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಅಂತಿಮ