ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಖ್ಯಮಂತ್ರಿ ಐ ಲವ್: ಗೌಡರಿಗೆ ನೋಟೀಸ್
ಪತ್ರಕರ್ತ ರವಿಬೆಳಗೆರೆ ನಿರ್ದೇಶನದ ಮುಖ್ಯಮಂತ್ರಿ ಐ ಲವ್ ಯೂ ಚಿತ್ರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.

ಚಲನಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ಹಾಸನ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕ ಹಾಗೂ ನಿದೇಶಕರಾದ ರವಿಬೆಳೆಗೆರೆ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ರಾಮ ಮೋಹನರೆಡ್ಡಿ ಅವರಿದ್ದ ಏಕ ಸದಸ್ಯ ಪೀಠ ದೇವೇಗೌಡರಿಗೆ ನೋಟೀಸ್ ಜಾರಿ ಮಾಡಿದೆ.

ಅರ್ಜಿದಾರ ಪರ ವಕೀಲ ಎಂ.ಪಿ. ಈಶ್ವರಪ್ಪ ಚಲನಚಿತ್ರವನ್ನು ಸೆನ್ಸಾರ್ ಮಂಡಲಿ ಮುಂದೆ ಪ್ರದರ್ಶಿಸಲಾಗುವುದು. ಬದಲಾಗಿ ಬಿಡುಗಡೆಗೆ ಮುನ್ನ ಎರಡೂ ಕಡೆಯ ವಕೀಲರು ವೀಕ್ಷಿಸಬೇಕೆಂಬ ನ್ಯಾಯಾಲದ ಆದೇಶ ಸರಿಯಲ್ಲ ಎಂದ ಅವರು, ಪ್ರತಿವಾದಿಗಳು ಚಿತ್ರದಲ್ಲಿನ ಕೆಲವು ಅಂಶಗಳು ತನ್ನ ಬಗ್ಗೆ ಇವೆ ಎಂದು ಹೇಳುತ್ತಿದ್ದಾರೆ. ಇದು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡಂತಾಯಿತು ಎಂದು ವಾದಿಸಿದ್ದಾರೆ.
ಮತ್ತಷ್ಟು
ಬಿಎಸ್ಪಿಯ ಪಟ್ಟಿಯೂ ಸದ್ಯವೇ ಬಿಡುಗಡೆ
ಕಣಕ್ಕಿಳಿಯದಂತೆ ಹಿರಿಯ ನಾಯಕರಿಗೆ ಹುಕುಂ
ಗೌಡರ ಹೇಳಿಕೆಗೆ ರಾಮಚಂದ್ರಗೌಡ ಟೀಕೆ
ಬಿಜೆಪಿಯೊಂದಿಗೆ ಮೈತ್ರಿಗೆ ಜೆಡಿಯು ಒಲವು
ಮತಪಟ್ಟಿಯಲ್ಲಿ ಹೆಸರು ಸೇರ್ಪಡಿಸಲು ಅವಕಾಶ
ಜನಪರ ರಾಜಕೀಯ ರಂಗ- ಕರ್ನಾಟಕ ಅಸ್ತಿತ್ವಕ್ಕೆ