ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಪ್ರಣಾಳಿಕೆ ಡಬ್ಬಿಂಗ್ ಸಿನಿಮಾವಂತೆ!
ND
ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು 'ಡಬ್ಬಿಂಗ್ ಸಿನಿಮಾ' ಎಂದು ಲೇವಡಿ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನೆರೆಯ ರಾಜ್ಯಗಳಲ್ಲಿ ಯಶಸ್ಸು ಕಂಡ ಅಂಶಗಳನ್ನಿಟ್ಟುಕೊಂಡು ಈ ಪ್ರಣಾಳಿಕೆ ತಯಾರಿಸಲಾಗಿದೆ ಎಂದು ಹೇಳಿದ್ದಾರೆ.

ರಾಯಚೂರಿನಲ್ಲಿ ಆಯೋಜಿಸಿದ ಜೈತ್ರಯಾತ್ರೆಯಲ್ಲಿ ಮಾತನಾಡುತ್ತಿದ್ದ ಅವರು, ಚಿತ್ರರಂಗದಲ್ಲಿ ಇತರ ಭಾಷೆಗಳಲ್ಲಿ ಹಿಟ್ ಆದ ಚಿತ್ರಗಳನ್ನು ರಿಮೇಕ್ ಮಾಡುವಂತೆ, ನೆರೆಯ ರಾಜ್ಯದಲ್ಲಿ ಯಶಸ್ಸು ಕಂಡ ಅಂಶಗಳನ್ನಿಟ್ಟು ತಯಾರಿಸಿದ ಈ ರಿಮೇಕ್ ಪ್ರಣಾಳಿಕೆಯನ್ನು ಜನ ಒಪ್ಪುವುದಿಲ್ಲ. ಜನಕ್ಕೆ ಸಹಜವಾದ ಸ್ವಮೇಕ್ ಪ್ರಣಾಳಿಕೆ ಬೇಕು ಎಂದ ಅವರು, ಅದು ಜೆಡಿಎಸ್‌ನಿಂದ ಮಾತ್ರ ಸಾಧ್ಯ ಎಂದರು.

ರಾಜ್ಯದಲ್ಲಿ ನಿರುದ್ಯೋಗ, ಬಡತನ, ನೀರಿನ ಸಮಸ್ಯೆ ಸೇರಿದಂತೆ ಅನೇಕ ತೊಂದರೆಗಳಿದ್ದರೂ, ಕಾಂಗ್ರೆಸ್ ಮಾತ್ರ ಇದ್ಯಾವುದನ್ನೂ ಪರಿಗಣಿಸದೇ ಕಲರ್ ಟಿವಿ ವಿತರಿಸುವ ಪೊಳ್ಳು ಭರವಸೆ ನೀಡಿದೆ. ಸಾಲಮನ್ನಾ, 2 ರೂ.ಗೆ ಒಂದು ಕೆ.ಜಿ ಅಕ್ಕಿ ವಿತರಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. ಅಷ್ಟಕ್ಕೂ ಬಂಡವಾಳ ಇಲ್ಲದ ಕಾಂಗ್ರೆಸ್‌ಗೆ ಇದು ಸಾಧ್ಯವೇ? ಎಂದು ಪ್ರಶ್ನಿಸಿದರು.

ರಾಜ್ಯದ, ಸ್ಥಳೀಯ ಜನರ ತೊಂದರೆಗಳಿಗೆ ಸ್ಪಂದಿಸಲು ಜನರು ಸ್ಥಳೀಯ ಪಕ್ಷವಾದ ಜೆಡಿಎಸ್ ಅನ್ನು ಬೆಂಬಲಿಸಬೇಕು ಎಂದ ಕುಮಾರ ಸ್ವಾಮಿ, ವಿದ್ಯಾವಂತ ನಿರುದ್ಯೌಗಿಗಳಿಗೆ ಉದ್ಯೋಗ ಕಲ್ಪಿಸುವ ಯೋಜನೆ ಜೊತೆಗೆ ಇತರ ಅನೇಕ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಎಂಬ ಭರವಸೆ ನೀಡಿದರು.

ಕೇಂದ್ರ ಸರಕಾರ ಕೂಡಾ ರಾಜ್ಯದ ನೀರಾವರಿ ಸಮಸ್ಯೆ ಸೇರಿದಂತೆ ಇತರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ರಾಜ್ಯಕ್ಕೆ ಬಿಡುಗಡೆಗೊಳಿಸಿದ 20 ಸಾವಿರ ಕೋಟಿ ರೂ. ಇವತ್ತಿಗೂ ದೊರಕುತ್ತಿದೆ ಎಂದು ಈ ಸಂದರ್ಭದಲ್ಲಿ ಕುಮಾರಸ್ವಾಮಿ ನುಡಿದರು.
ಮತ್ತಷ್ಟು
ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ
ನೀತಿ ಸಂಹಿತೆ: ಜನತಾದರ್ಶನಕ್ಕೆ ಕತ್ತರಿ
ಮುಖ್ಯಮಂತ್ರಿ ಐ ಲವ್: ಗೌಡರಿಗೆ ನೋಟೀಸ್
ಬಿಎಸ್ಪಿಯ ಪಟ್ಟಿಯೂ ಸದ್ಯವೇ ಬಿಡುಗಡೆ
ಕಣಕ್ಕಿಳಿಯದಂತೆ ಹಿರಿಯ ನಾಯಕರಿಗೆ ಹುಕುಂ
ಗೌಡರ ಹೇಳಿಕೆಗೆ ರಾಮಚಂದ್ರಗೌಡ ಟೀಕೆ