ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಮಣ್ಣ ಶಿಕ್ಷಕ 'ಮಾವನ ಮನೆಗೆ'
ವಿದ್ಯಾರ್ಥಿಗಳಿಗೆ ಆದರ್ಶವಾಗಿರಬೇಕಾದ ಶಿಕ್ಷಕನೊಬ್ಬ, ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಪರಿಣಾಮ ಇದೀಗ ಪೊಲೀಸರ ವಶವಾಗಿರುವ ಘಟನೆ ಚೆನ್ನಪಟ್ಟಣದಲ್ಲಿ ಸಂಭವಿಸಿದೆ.

ಪಾಠ ಮಾಡುವಾಗ ವಿದ್ಯಾರ್ಥಿನಿಯರನ್ನು ಎಲ್ಲೆಂದರಲ್ಲಿ ಮುಟ್ಟುವುದು, ತೊಡೆ ಜಿಗುಟುವುದು, ಅಶ್ಲೀಲ ಎಸ್ಎಂಎಸ್‌ಗಳನ್ನು ಕಳುಹಿಸುವ ಮೂಲಕ ವಿದ್ಯಾರ್ಥಿನಿಯರಲ್ಲಿ ಜಿಗುಪ್ಸೆ ಹುಟ್ಟಿಸಿದ್ದ ಇಲ್ಲಿನ ಪಾಲಿಟೆಕ್ನಿಕ್ ಶಾಲೆಯ ಮಂಜುನಾಥ್ ಎಂಬ ಶಿಕ್ಷಕನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ವೈದ್ಯರೊಬ್ಬರ ಮಗನಾಗಿದ್ದು ಉತ್ತಮ ಕುಟುಂಬಕ್ಕೆ ಸೇರಿದ ಈತ ಈ ಹಿಂದೆ ಶಿಕ್ಷಾರೂಪದ ವರ್ಗಾವಣೆಯ ಮೂಲಕ ಚನ್ನಪಟ್ಟಣಕ್ಕೆ ಬಂದಿದ್ದ ಎನ್ನಲಾಗಿದೆ. ಈ ಕುರಿತು ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಲಾಗಿತ್ತಾದರೂ ಅವರು ಸೂಕ್ತ ಕ್ರಮ ಕೈಗೊಳ್ಳದೇ ಕೈಕಟ್ಟಿ ಕುಳಿತಿದ್ದರು. ಹೆಚ್ಚು ಮುಂದುವರಿದರೆ ತಮಗೆ ಬರಬೇಕಾದ ಆಂತರಿಕ ಮೌಲ್ಯಮಾಪನದ (ಇಂಟರ್ನಲ್ ಅಸೆಸ್ಮೆಂಟ್) ಅಂಕಗಳಿಗೆ ಎಲ್ಲಿ ಖೋತಾ ಬೀಳುವುದೋ ಎಂದು ಹೆದರಿ ಕೆಲ ವಿದ್ಯಾರ್ಥಿನಿಯರು ಈತನ ಚೇಷ್ಟೆಗಳನ್ನು ಸಹಿಸಿಕೊಂಡಿದ್ದರು ಎನ್ನಲಾಗಿದೆ.

ಆದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದಾಗಿ ಕೆಲವು ಪಾಲಕರೇ ಈ ಕುರಿತು ಆಸ್ಥೆ ವಹಿಸಿ ಆರೋಪಿಯನ್ನು ಪೊಲೀಸ್ ವಶಕ್ಕೆ ವಹಿಸುವುದರಲ್ಲಿ ಸಹಾಯಮಾಡಿದ್ದಾರೆ. ಪೊಲೀಸರು ಈತನನ್ನು ಬಂಧಿಸಿ ಕರೆದುಕೊಂಡು ಹೋಗುವಾಗ ಕೆಲವರು ಈತನ ಮೇಲೆ ಹಲ್ಲೆ ಮಾಡಲು ಪ್ರಯತ್ನಿದರು. ಆದರೆ, ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವುದನ್ನು ತಡೆದಿದ್ದಾರೆ ಎಂದು ವರದಿ ತಿಳಿಸಿದೆ.
ಮತ್ತಷ್ಟು
ಕಾಂಗ್ರೆಸ್ ಪ್ರಣಾಳಿಕೆ ಡಬ್ಬಿಂಗ್ ಸಿನಿಮಾವಂತೆ!
ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ
ನೀತಿ ಸಂಹಿತೆ: ಜನತಾದರ್ಶನಕ್ಕೆ ಕತ್ತರಿ
ಮುಖ್ಯಮಂತ್ರಿ ಐ ಲವ್: ಗೌಡರಿಗೆ ನೋಟೀಸ್
ಬಿಎಸ್ಪಿಯ ಪಟ್ಟಿಯೂ ಸದ್ಯವೇ ಬಿಡುಗಡೆ
ಕಣಕ್ಕಿಳಿಯದಂತೆ ಹಿರಿಯ ನಾಯಕರಿಗೆ ಹುಕುಂ