ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಚಿಲ್ಲರೆ' ಸಮಸ್ಯೆ: ಹೊಟೇಲಿಗರ ಆಕ್ರೋಶ
'ಚಿಲ್ಲರೆ ನೀಡಿ ಸಹಕರಿಸದ' ಆರ್‌ಬಿಐಗೆ ಖಂಡನೆ
NRB
ದೈನಂದಿನ ವ್ಯವಹಾರದಲ್ಲಿ ತಲೆದೋರುವ ಚಿಲ್ಲರೆ ನಾಣ್ಯದ ಸಮಸ್ಯೆ ಬಗೆಹರಿಯದ ಸಮಸ್ಯೆಯನ್ನು ಪರಿಹರಿಸಲು ಆರ್‌ಬಿಐಯನ್ನು ಒತ್ತಾಯಿಸಿ ಬೆಂಗಳೂರು ಹೊಟೇಲುಗಳ ಸಂಘ ಶುಕ್ರವಾರ ಪ್ರತಿಭಟನೆ ನಡೆಸಿತು. ಪ್ರತಿಭಟನೆಯ ವೇಳೆ ಈ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳದಿರುವ ಭಾರತೀಯ ರಿಸರ್ವ್ ಬ್ಯಾಂಕಿನ ಧೋರಣೆಯನ್ನು ಖಂಡಿಸಲಾಯಿತು.

ಸಮಸ್ಯೆ ಪರಿಹಾರಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕಿಗೆ ರಾಜ್ಯಾದ್ಯಂತ ಇರುವ ಹೊಟೇಲು ಸಂಘಟನೆಗಳು ಆಗಿಂದಾಗ್ಗೆ ಮನವಿಯನ್ನು ಸಲ್ಲಿಸುತ್ತಿದ್ದರೂ ಇದರಿಂದೇನೂ ಪ್ರಯೋಜನವಾಗಿಲ್ಲ ಎಂದು ಸಂಘದ ಅಧ್ಯಕ್ಷ ವಾಸುದೇವ ಅಡಿಗ ಆರೋಪಿಸಿದರು.

ಬ್ಯಾಂಕಿನ ಅಧಿಕಾರಿಗಳು ನೆಪಮಾತ್ರಕ್ಕೆ ಭರವಸೆಯನ್ನು ನೀಡುತ್ತಾರೆಯೇ ವಿನಃ ಪರಿಣಾಮಕಾರಿಯಾದ ಮತ್ತು ಶಾಶ್ವತವಾದ ಪರಿಹಾರ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಈ ಸಮಸ್ಯೆ ಎಷ್ಟರ ಮಟ್ಟಿಗೆ ಬಿಗಡಾಯಿಸಿದೆಯೆಂದರೆ ಚಿಲ್ಲರೆ ನೀಡಿಕೆಗಾಗಿ ನಾವು ನೋಟುಗಳನ್ನು ನೀಡಿದಾಗ ನಮಗೆ ಸಿಗುವುದು ಬರೀ 5 ರೂಪಾಯಿ ಮುಖಬೆಲೆಯ ನಾಣ್ಯಗಳು. 1 ರೂ. ಮತ್ತು 2 ರೂ. ಮುಖಬೆಲೆಯ ನಾಣ್ಯಗಳು ಸಿಗುತ್ತಲೇ ಇಲ್ಲ. ಹೀಗಾಗಿ ಹೊಟೇಲು ವ್ಯವಹಾರದ ವೇಳೆ ಮಾಲೀಕರು ಗ್ರಾಹಕರೊಂದಿಗೆ ಜಗಳವಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಸಿ.ರಾವ್ ನುಡಿದಿದ್ದಾರೆ.

ಈ ಹಿನ್ನೆಲೆಯಲ್ಲಿ ಸದರಿ ಅಧಿಕಾರಿಗಳ ಧೋರಣೆಯನ್ನು ಖಂಡಿಸುವ ದೃಷ್ಟಿಯಿಂದ ಬೆಂಗಳೂರಿನ ಭಾರತೀಯ ರಿಸರ್ವ್ ಬ್ಯಾಂಕ್ ಎದುರು ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾದ ಪರಿಸ್ಥಿತಿ ಒದಗಿ ಬಂದಿದೆ ಎಂದು ಈ ಸಂದರ್ಭದಲ್ಲಿ ಅವರುಗಳು ತಿಳಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಹೊಟೇಲು ಉದ್ಯಮದ ಬಾ. ರಾಮಚಂದ್ರ ಉಪಾಧ್ಯ, ರಾಜೀವ ಶೆಟ್ಟಿ, ಮಧುಕರ ಶೆಟ್ಟಿ, ಬೇಳೂರು ರಾಘವೇಂದ್ರ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಮತ್ತಷ್ಟು
ನೀತಿಸಂಹಿತೆ ಉಲ್ಲಂಘನೆ ಬಗ್ಗೆ ದೂರು: ಗೌಡ
ಕಾಮಣ್ಣ ಶಿಕ್ಷಕ 'ಮಾವನ ಮನೆಗೆ'
ಕಾಂಗ್ರೆಸ್ ಪ್ರಣಾಳಿಕೆ ಡಬ್ಬಿಂಗ್ ಸಿನಿಮಾವಂತೆ!
ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ
ನೀತಿ ಸಂಹಿತೆ: ಜನತಾದರ್ಶನಕ್ಕೆ ಕತ್ತರಿ
ಮುಖ್ಯಮಂತ್ರಿ ಐ ಲವ್: ಗೌಡರಿಗೆ ನೋಟೀಸ್