ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣ್ಣಾವ್ರು ಅಗಲಿ ಅದಾಗಲೇ ಎರಡು ವರ್ಷ
ಎರಡು ವರ್ಷಗಳ ಹಿಂದೆ ಕನ್ನಡ ಚಿತ್ರರಸಿಕರಿಗೆ ಸುನಾಮಿಯಂತೆ ಬಂದು ಅಪ್ಪಳಿಸಿದ ಡಾ| ರಾಜ್ಕುಮಾರ್‌ ಅವರ ನಿಧನದ ಸುದ್ದಿಯನ್ನು ಅಂದು ಹೇಗೆ ಅರಗಿಸಿಕೊಳ್ಳಲು ಸಾಧ್ಯವಿರಲಿಲ್ಲವೋ, ಅವರು ಅಗಲಿ ಆಗಲೇ ಎರಡು ವರ್ಷಗಳಾಯಿತು ಎಂಬ ವಾಸ್ತವವನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಈಗಲೂ ಸಹ ವಾಹಿನಿಗಳಲ್ಲಿ ರಾಜ್ ಅವರ ಸಿನಿಮಾ-ಹಾಡುಗಳನ್ನು ನೋಡುವಾಗ ಅವರು 'ಇಲ್ಲ' ಎಂಬ ಭಾವನೆ ನಮಗೆ ಮೂಡುವುದೇ ಇಲ್ಲ. ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅವರ ಸಮಾಧಿಯಂತೂ ಬಿಡಿ ಅಭಿಮಾನಿಗಳಿಗೆ ಯಾತ್ರಾಸ್ಥಳವೇ ಆಗಿ ಹೋಗಿದೆ.

ಇಷ್ಟಾಗಿಯೂ ಸಹ ಡಾ| ರಾಜ್‌ರವರಿಗೆ ಅತಿ ಪ್ರೀತಿಯ ನೆಲೆಯಾಗಿದ್ದ ದೊಡ್ಡ ಗಾಜನೂರಿನ ಅವರ ಮನೆ ಇನ್ನೂ ಸ್ಮಾರಕವಾಗಿಲ್ಲ. ಈ ಕುರಿತು ಅವರ ಅಭಿಮಾನಿಗಳು ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಹ ಪ್ರಯೋಜನವಾಗಿಲ್ಲ.

ಆದರೆ ಬೆಂಗಳೂರಿನಲ್ಲಿರುವ ರಾಜ್ ಸಮಾಧಿಯನ್ನು ಸ್ಮಾರಕವನ್ನಾಗಿಸುವೆಡೆ ಸರ್ಕಾರ ಮನಸ್ಸು ಮಾಡಿದೆ ಎಂಬ ವಿಷಯ ಅವರ ಅಭಿಮಾನಿಗಳಲ್ಲಿ ಸ್ವಲ್ಪವಾದರೂ ಖುಷಿ ತಂದಿದೆ. ಇದರ ನಿರ್ಮಾಣಕ್ಕಾಗಿ ಟೆಂಡರ್ ಕರೆಯಲು ನಿರ್ಧರಿಸಲಾಗಿದ್ದು ಡಾ| ರಾಜ್‌ಕುಮಾರ್ ಪ್ರತಿಷ್ಠಾನ ಸಿದ್ಧಪಡಿಸಿರುವ ನೀಲನಕ್ಷೆಯನ್ನು ಲೋಕೋಪಯೋಗಿ ಇಲಾಖೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ಶನಿವಾರ ರಾಜ್ ಅವರ ಎರಡನೇ ಪುಣ್ಯಸ್ಮರಣೆಯ ದಿನ. ಇದರ ನಿಮಿತ್ತ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಸಮಾಧಿಯ ಬಳಿ ಅಭಿಮಾನಿಗಳು ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ ಮತ್ತು ಅಭಿಮಾನಿಗಳಿಗಾಗಿ ರಾಜ್ ಕುಟುಂಬದವರು ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ.

ಒಟ್ಟಿನಲ್ಲಿ ಅಣ್ಣಾವ್ರ ಭೌತಿಕ ಶರೀರ ನಮ್ಮಿಂದ ದೂರವಾಗಿದ್ದರೂ ಅವರು ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂಬುದು ಸತ್ಯ.
ಮತ್ತಷ್ಟು
ಪರಿಮಳಾ ನಾಗಪ್ಪ ಬಿಎಸ್ಪಿಗೆ
'ಚಿಲ್ಲರೆ' ಸಮಸ್ಯೆ: ಹೊಟೇಲಿಗರ ಆಕ್ರೋಶ
ನೀತಿಸಂಹಿತೆ ಉಲ್ಲಂಘನೆ ಬಗ್ಗೆ ದೂರು: ಗೌಡ
ಕಾಮಣ್ಣ ಶಿಕ್ಷಕ 'ಮಾವನ ಮನೆಗೆ'
ಕಾಂಗ್ರೆಸ್ ಪ್ರಣಾಳಿಕೆ ಡಬ್ಬಿಂಗ್ ಸಿನಿಮಾವಂತೆ!
ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ