ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಿಕೆಟ್ ಹಂಚಿಕೆ: ಭಿನ್ನಮತವಿಲ್ಲ ಎಂದ ಯಡಿಯೂರ್
ಬಿಜೆಪಿಯೊಳಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಎಲ್ಲ ಪಕ್ಷಗಳಂತೆ ಬಿಜೆಪಿಯಲ್ಲೂ ಹೆಚ್ಚಿನ ಸಂಖ್ಯೆಯ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ನೀರೀಕ್ಷೆ ಇಟ್ಟುಕೊಂಡಿರುವ ಎಲ್ಲರಿಗೂ ಟಿಕೆಟ್ ಕೊಡಲು ಸಾಧ್ಯವಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಟಿಕೆಟ್ ಸಿಗದವರು ಬೇಸರಗೊಳ್ಳದೆ ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಸದ್ಯದಲ್ಲೇ ಎರಡನೇ ಪಟ್ಟಿ
ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಸೋಮವಾರದ ಬಳಿಕ ಬಿಡುಗಡೆ ಮಾಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳೂ ಸೇರಿದಂತೆ 50 ಕ್ಕೂ ಹೆಚ್ಚಿನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲು ಸಿದ್ಧತೆ ನಡೆದಿದೆ ಯಡಿಯೂರಪ್ಪ ತಿಳಿಸಿದ್ದಾರೆ.

ಅರುಣ್ ಜೆಟ್ಲಿ ಅವರು ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದು, ಚುನಾವಣೆ ಪ್ರಣಾಳಿಕೆಗೆ ಅಂತಿಮ ರೂಪ ನೀಡಲಿದ್ದಾರೆ. ಡಾ.ವಿ.ಎಸ್.ಆಚಾರ್ಯ ನೇತೃತ್ವದ ಸಮಿತಿ ಈಗಾಗಲೇ ಪ್ರಣಾಳಿಕೆ ಸಿದ್ಧಪಡಿಸಿದೆ. ಏಪ್ರಿಲ್ 15 ರಂದು ಇದನ್ನು ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ನುಡಿದರು.
ಮತ್ತಷ್ಟು
ಅಣ್ಣಾವ್ರು ಅಗಲಿ ಅದಾಗಲೇ ಎರಡು ವರ್ಷ
ಪರಿಮಳಾ ನಾಗಪ್ಪ ಬಿಎಸ್ಪಿಗೆ
'ಚಿಲ್ಲರೆ' ಸಮಸ್ಯೆ: ಹೊಟೇಲಿಗರ ಆಕ್ರೋಶ
ನೀತಿಸಂಹಿತೆ ಉಲ್ಲಂಘನೆ ಬಗ್ಗೆ ದೂರು: ಗೌಡ
ಕಾಮಣ್ಣ ಶಿಕ್ಷಕ 'ಮಾವನ ಮನೆಗೆ'
ಕಾಂಗ್ರೆಸ್ ಪ್ರಣಾಳಿಕೆ ಡಬ್ಬಿಂಗ್ ಸಿನಿಮಾವಂತೆ!