ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಖೊಟ್ಟಿ ಅಂಕಪಟ್ಟಿ ಸಲ್ಲಿಸಿದ 18 ಶಿಕ್ಷಕರಿಗೆ ಶಿಕ್ಷೆ
ನಕಲಿ ಅಂಕಪಟ್ಟಿಯನ್ನು ಸಲ್ಲಿಸಿ ಶಿಕ್ಷಕ ವೃತ್ತಿಗೆ ಸೇರಿದ್ದ 18 ಮಂದಿಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಿರುವ ಪ್ರಕರಣ ಕೋಲಾರದಿಂದ ವರದಿಯಾಗಿದ್ದು, ನಕಲಿ ಅಂಕಪಟ್ಟಿಯ ಜಾಲದ ವ್ಯಾಪ್ತಿಯ ಕುರಿತು ಎಲ್ಲರಲ್ಲೂ ಆತಂಕ ಹುಟ್ಟಿಸಿದೆ.

ಈ 18 ಮಂದಿಯಲ್ಲಿ 8 ಜನ ಮಹಿಳೆಯರೂ ಸೇರಿದ್ದು, ಇವರೆಲ್ಲರೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದವರಾಗಿದ್ದಾರೆ ಎಂದು ತಿಳಿದುಬಂದಿದೆ. 2001ರಲ್ಲಿ ಶಿಕ್ಷಕರಾಗಿ ಇವರು ಆಯ್ಕೆಯಾದ ನಂತರ 2003ರಲ್ಲಿ ನಕಲಿ ಅಂಕಪಟ್ಟಿಯ ಪ್ರಕರಣ ಬೆಳಕಿಗೆ ಬಂದಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಕೋಲಾರ ಜಿಲ್ಲಾ ಸಿವಿಲ್ ನ್ಯಾಯಾಲಯ ತಪ್ಪಿತಸ್ಥರಿಗೆ ತಲಾ ಎರಡೂವರೆ ವರ್ಷ ಜೈಲು ಶಿಕ್ಷೆ ಮತ್ತು ಮೂರು ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಮತ್ತಷ್ಟು
ಚುನಾವಣಾ ಬ್ಯಾನರ್ ಕಟೌಟ್‌ಗಳ ಕಡ್ಡಾಯ ತೆರವು
ಟಿಕೆಟ್ ಹಂಚಿಕೆ: ಭಿನ್ನಮತವಿಲ್ಲ ಎಂದ ಯಡಿಯೂರ್
ಅಣ್ಣಾವ್ರು ಅಗಲಿ ಅದಾಗಲೇ ಎರಡು ವರ್ಷ
ಪರಿಮಳಾ ನಾಗಪ್ಪ ಬಿಎಸ್ಪಿಗೆ
'ಚಿಲ್ಲರೆ' ಸಮಸ್ಯೆ: ಹೊಟೇಲಿಗರ ಆಕ್ರೋಶ
ನೀತಿಸಂಹಿತೆ ಉಲ್ಲಂಘನೆ ಬಗ್ಗೆ ದೂರು: ಗೌಡ