ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಕ್ಕಟ್ಟು ನಿವಾರಣೆಗೆ ದೌಡಾಯಿಸಿದ ಜೇಟ್ಲಿ
ಬಿಜೆಪಿ ಟಿಕೆಟ್ ಹಂಚಿಕೆಯ ಕುರಿತಂತೆ ಅಪಸ್ವರ ಕೇಳಿ ಬಂದಿದ್ದರಿಂದ ಬಿಕ್ಕಟ್ಟು ನಿವಾರಣೆಗೆ ಅರುಣ್ ಜೇಟ್ಲಿ ಧಾವಿಸಿ ಬಂದಿದ್ದಾರೆ. 136 ಅಭ್ಯರ್ಥಿಗಳನ್ನೊಳಗೊಂಡ ಮೊದಲ ಪಟ್ಟಿ ಬಿಡುಗಡೆಯಾದ ನಂತರ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಟಿಕೆಟ್ ವಂಚಿತರು ಮೊಳಗಿಸಿರುವ ಬಂಡಾಯದ ದನಿ ಅಡಗಿಸಲು ವರಿಷ್ಠರು ನಡೆಸಿದ ಸಂಧಾನದಿಂದಲೂ ಆಕ್ರೋಶ ಶಮನಗೊಂಡಿಲ್ಲ.

ರಾಜ್ಯ ಚುನಾವಣೆ ಉಸ್ತುವಾರಿ ಹೊತ್ತಿರುವ ಅರುಣ್ ಜೇಟ್ಲಿ ಹಾಗೂ ರಾಜ್ಯದ ಹಿರಿಯ ಮುಖಂಡರನ್ನು ಘೆರಾವ್ ಮಾಡಿದ ಕಾರ್ಯಕರ್ತರು ನ್ಯಾಯ ಒದಗಿಸುವಂತೆ ಒತ್ತಾಯಿಸಿದಾಗ ಬಿಕ್ಕಟ್ಟನ್ನು ಶೀಘ್ರವೇ ಉಪಶಮನಗೊಳಿಸಲಾಗುವುದು ಎಂದು ಜೇಟ್ಲಿ ಆಶ್ವಾಸನೆ ನೀಡಿದರು. ಈ ಪಟ್ಟಿಯೇ ಅಂತಿಮವಲ್ಲ ಎಂದು ಸದಾನಂದ ಗೌಡರು ಹೇಳುವ ಮೂಲಕ ಪರಿಷ್ಕರಣೆಗೆ ಇನ್ನೂ ಅವಕಾಶವಿದೆ ಎಂಬ ಸಾಧ್ಯತೆಯನ್ನು ಹೊರಹಾಕಿದರು.

ಈ ಎಲ್ಲಾ ಬೆಳವಣಿಗೆಗಳನ್ನು ಅವಲೋಕಿಸಿದ ಅರುಣ್ ಜೇಟ್ಲಿ, ಚುನಾವಣೆ ಸಮೀಪಿಸುತ್ತಿರುವಾಗ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಶಕ್ತಿಮೀರಿ ದುಡಿಯುವ ಅಗತ್ಯತೆಗಳ ಕುರಿತು ಮುಖಂಡರಿಗೆ ಕಟು ಉಪದೇಶವನ್ನು ನೀಡಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾರ್ಯಕರ್ತರೊಂದಿಗಿನ ಸಮಾಲೋಚನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಜೇಟ್ಲಿ, ಜೆಡಿಯು ಪಕ್ಷದ ಜೊತೆಗಿನ ಮೈತ್ರಿಯ ಸಂಬಂಧದಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಿಕೊಳ್ಳಲು ಆ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ಮತ್ತಷ್ಟು
ನಮಗಾರ ಹಂಗೂ ಬೇಕಿಲ್ಲ: ಯಡಿಯೂರ್
ಖೊಟ್ಟಿ ಅಂಕಪಟ್ಟಿ ಸಲ್ಲಿಸಿದ 18 ಶಿಕ್ಷಕರಿಗೆ ಶಿಕ್ಷೆ
ಚುನಾವಣಾ ಬ್ಯಾನರ್ ಕಟೌಟ್‌ಗಳ ಕಡ್ಡಾಯ ತೆರವು
ಟಿಕೆಟ್ ಹಂಚಿಕೆ: ಭಿನ್ನಮತವಿಲ್ಲ ಎಂದ ಯಡಿಯೂರ್
ಅಣ್ಣಾವ್ರು ಅಗಲಿ ಅದಾಗಲೇ ಎರಡು ವರ್ಷ
ಪರಿಮಳಾ ನಾಗಪ್ಪ ಬಿಎಸ್ಪಿಗೆ