ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುರುಡೇಶ್ವರ ರಾಜಗೋಪುರ ಲೋಕಾರ್ಪಣೆ
ಏಷ್ಯಾದಲ್ಲಿಯೇ ಅತಿದೊಡ್ಡ ರಾಜಗೋಪುರ ಎಂಬ ಅಗ್ಗಳಿಕೆಗೆ ಪಾತ್ರವಾಗಿರುವ ಮುರುಡೇಶ್ವರ ದೇವಾಲಯದ ರಾಜಗೋಪುರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಶನಿವಾರ ಉದ್ಘಾಟಿಸಿದರು.

ಇದುವರೆಗೂ ತಂಜಾವೂರಿನ ಬೃಹದೇಶ್ವರ ದೇವಾಲಯದ ರಾಜಗೋಪುರವೇ ದಾಖಲೆಯ ಎತ್ತರವನ್ನು ಹೊಂದಿತ್ತು. ಈಗ ದೇವಸ್ಥಾನದ ಮುಖ್ಯ ಟ್ರಸ್ಟಿ ಆರ್.ಎನ್.ಶೆಟ್ಟಿಯವರು ನಿರ್ಮಿಸಿರುವ ಈ ರಾಜಗೋಪುರ 250 ಅಡಿ ಎತ್ತರವಿದ್ದು 21 ಅಂತಸ್ತುಗಳನ್ನು ಹೊಂದಿದೆ. ಹೊರಭಾಗದಲ್ಲಿ ಸಂಪೂರ್ಣ ದ್ರಾವಿಡ ಶೈಲಿಯ ಕಲಾಕೃತಿಗಳನ್ನು ಕೆತ್ತಲಾಗಿರುವುದು ಇದರ ವೈಶಿಷ್ಟ್ಯ.

ರಾಜಗೋಪುರ ಉದ್ಘಾಟಿಸಿದ ವೀರೇಂದ್ರ ಹೆಗಡೆಯವರು ಮಾತನಾಡುತ್ತಾ, ಮನುಷ್ಯನಿಗೆ ಶಾಂತಿ ಸಿಗಬೇಕೆಂದರೆ ಹೆಚ್ಚು ದಾನ ಧರ್ಮಗಳನ್ನು ಮಾಡಬೇಕು. ಮನಸ್ಸಿನಲ್ಲಿ ಶ್ರದ್ದಾಭಕ್ತಿಗಳಿರಬೇಕು. ಆಗಲೇ ಆತ ಬದುಕಿನಲ್ಲಿ ಮುಂದೆ ಬರಲು ಸಾಧ್ಯ ಎಂದು ತಿಳಿಸಿದರು.

ಭಗವಂತನ ಅಗಾಧತೆ ಹಾಗೂ ಔನ್ನತ್ಯಗಳ ಕಲ್ಪನೆ ಬರಬೇಕೆಂದರೆ ತನ್ನಲ್ಲಿರುವ ಅಹಂಕಾರವನ್ನು ತಗ್ಗಿಸುವ ಕಾರಣಕ್ಕಾಗಿ ದೇವಾಲಯಗಳಲ್ಲಿ ಬೃಹತ್ ಗಾತ್ರದ ರಾಜಗೋಪುರಗಳು ಹಾಗೂ ವಿಗ್ರಹಗಳನ್ನು ಕೆತ್ತಲಾಗಿರುತ್ತದೆ. ದಕ್ಷಿಣ ಕನ್ನಡ ಭಾಗದಲ್ಲಿನ ಸರ್ವಶ್ರೇಷ್ಠ ದೇವಾಲಯಗಳಲ್ಲಿ ಒಂದಾದ ಮುರುಡೇಶ್ವರ ದೇವಾಲಯವನ್ನು ಅಂತಾರಾಷ್ಟ್ರೀಯ ಖ್ಯಾತಿಗೆ ಕೊಂಡೊಯ್ದ ಆರ್.ಎನ್.ಶೆಟ್ಟಿಯವರ ಸಾಧನೆ ಅನನ್ಯ ಎಂದು ಹೆಗಡೆಯವರು ಈ ಸಂದರ್ಭದಲ್ಲಿ ಪ್ರಶಂಸಿಸಿದರು.
ಮತ್ತಷ್ಟು
ಬಿಜೆಪಿಯೊಳಗೆ ಬಂಡಾಯವಿಲ್ಲ: ಡಿವಿಎಸ್
ಬಿಕ್ಕಟ್ಟು ನಿವಾರಣೆಗೆ ದೌಡಾಯಿಸಿದ ಜೇಟ್ಲಿ
ನಮಗಾರ ಹಂಗೂ ಬೇಕಿಲ್ಲ: ಯಡಿಯೂರ್
ಖೊಟ್ಟಿ ಅಂಕಪಟ್ಟಿ ಸಲ್ಲಿಸಿದ 18 ಶಿಕ್ಷಕರಿಗೆ ಶಿಕ್ಷೆ
ಚುನಾವಣಾ ಬ್ಯಾನರ್ ಕಟೌಟ್‌ಗಳ ಕಡ್ಡಾಯ ತೆರವು
ಟಿಕೆಟ್ ಹಂಚಿಕೆ: ಭಿನ್ನಮತವಿಲ್ಲ ಎಂದ ಯಡಿಯೂರ್