ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎನ್ಕೌಂಟರ್ ದಯಾನಾಯಕ್ ಕಾಂಗ್ರೆಸ್‌ಗೆ?
ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಪೊಲೀಸ್ ಅಧಿಕಾರಿ ದಯಾನಾಯಕ್‌ ಶೀಘ್ರದಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದು, ಕಾರ್ಕಳ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷಗಳ ಮೂಲಗಳ ಪ್ರಕಾರ ದಯಾನಾಯಕ್ ಶೀಘ್ರದಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.

ಆದರೆ ಈ ವದಂತಿಯನ್ನು ತಳ್ಳಿ ಹಾಕಿರುವ ದಯಾನಾಯಕ್, ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಯಾವುದಾದರೂ ರಾಜಕೀಯ ಪಕ್ಷಗಳೊಂದಿಗೆ ತನ್ನ ಹೆಸರು ಥಳಕು ಹಾಕಿಕೊಳ್ಳುತ್ತದೆ. ಕಾಂಗ್ರೆಸ್ ಸೇರಲಿದ್ದೇನೆ ಎಂಬ ಮಾತು ಹುರುಳಿಲ್ಲದ್ದು ಎಂದು ಹೇಳಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ಮೂಲಗಳು ಮಾತ್ರ ದಯಾನಾಯಕ್ ಹೇಳಿಕೆಯನ್ನು ತಳ್ಳಿಹಾಕಿದ್ದು, ದಿಲ್ಲಿ ವರಿಷ್ಠರ ಜೊತೆ ನಾಯಕ್ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಿವೆ.

ಈ ಬೆಳವಣಿಗೆಯಿಂದ ಬಿಜೆಪಿ ಪಾಳಯದಲ್ಲಿ ಆತಂಕ ಮೂಡಿಸಿದೆ. ಕರಾವಳಿಯಲ್ಲಿ ಯುವಕರೇ ಬಿಜೆಪಿಗೆ ಆಧಾರ. ಕಾರ್ಕಳ ಕ್ಷೇತ್ರದಲ್ಲಿ ಹಲವಾರು ಕೆಲಸ ಕಾರ್ಯಗಳಲ್ಲಿ ನಾಯಕ್ ಹೆಸರು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ದಯಾನಾಯಕ್ ಆಗಮನದಿಂದ ಕೊಂಚ ಹಿನ್ನೆಡೆ ಆಗಬಹುದೆಂಬ ಭೀತಿ ಬಿಜೆಪಿ ನಾಯಕರದ್ದು ಎಂದು ಹೇಳಲಾಗಿದೆ.

ಒಟ್ಟಾರೆಯಾಗಿ ನಾಯಕ್‌ಗೆ ಟಿಕೆಟ್ ನೀಡಿದರೆ ಮತದಾರರ ಮನ ಒಲಿಸುವುದು ಕಷ್ಟವಾಗದು ಎಂಬ ಲೆಕ್ಕಚಾರದಲ್ಲಿ ಕಾಂಗ್ರೆಸ್ ದಯಾನಾಯಕ್ ಅವರನ್ನು ಪಕ್ಷಕ್ಕೆ ಕರೆಸಿಕೊಳ್ಳಲು ಕಸರತ್ತು ಪ್ರಾರಂಭಿಸಿದೆ.
ಮತ್ತಷ್ಟು
ಎರಡು ಕ್ಷೇತ್ರದಲ್ಲಿ ಯಡಿಯೂರಪ್ಪ ಸ್ಪರ್ಧೆ
ಸಿದ್ದಾಂತ ಮರೆತ ಬಿಜೆಪಿ, ಜೆಡಿಎಸ್: ಸಿಬಲ್
ಮುರುಡೇಶ್ವರ ರಾಜಗೋಪುರ ಲೋಕಾರ್ಪಣೆ
ಬಿಜೆಪಿಯೊಳಗೆ ಬಂಡಾಯವಿಲ್ಲ: ಡಿವಿಎಸ್
ಬಿಕ್ಕಟ್ಟು ನಿವಾರಣೆಗೆ ದೌಡಾಯಿಸಿದ ಜೇಟ್ಲಿ
ನಮಗಾರ ಹಂಗೂ ಬೇಕಿಲ್ಲ: ಯಡಿಯೂರ್