ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಓಟಿಗಾಗಿ ಅಂಬೇಡ್ಕರ್ ಚಿತ್ರ ಬಳಸುವ ಬಿಜೆಪಿ: ಜಯಕುಮಾರ್
ಅಂಬೇಡ್ಕರ್ ಅವರನ್ನು ವಿರೋಧಿಸುತ್ತಿದ್ದ ಬಿಜೆಪಿ ಪಕ್ಷವೂ ಕೂಡ ಓಟು ರಾಜಕಾರಣಕ್ಕಾಗಿ ಅವರ ಭಾವಚಿತ್ರವನ್ನು ಬಳಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ, ಅಂಬೇಡ್ಕರ್‌ಗೆ ಕಾಂಗ್ರೆಸ್ ಮಾಡಿರುವ ದ್ರೋಹವೇನು ಎಂಬುದು ದಲಿತರಿಗೆ ಅರ್ಥವಾದರೆ ಅವರ ಒಂದು ಮತವೂ ಆ ಪಕ್ಷಕ್ಕೆ ಬೀಳುವುದಿಲ್ಲ ಎಂದು ಜೆಡಿಎಸ್ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಡಿ.ಟಿ.ಜಯಕುಮಾರ್ ಹೇಳಿದ್ದಾರೆ.

ಅಂಬೇಡ್ಕರ್ ಜಯಂತಿ ಅಂಗವಾಗಿ ಪಕ್ಷದ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಅನ್ಯಾಯ, ವಂಚನೆಗಳು ಕಂಡುಬಂದಾಗ ಹಕ್ಕುಗಳಿಗಾಗಿ ಹೇಗೆ ಹೋರಾಡಬೇಕೆಂಬುದನ್ನು ಅಂಬೇಡ್ಕರ್ರವರು ತೋರಿಸಿಕೊಟ್ಟಿದ್ದಾರೆ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಮಾತನಾಡಿ, ಪಕ್ಷವು ದಲಿತರ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ಮತ್ತಷ್ಟು
ಬಿಜೆಪಿಯಲ್ಲಿ ಬಂಡಾಯದ ಹೊಗೆ: ವರಿಷ್ಠರಿಗೆ ದೂರಲು ನಿರ್ಧಾರ
ವಲಸಿಗರ ಬಗ್ಗೆ ಖರ್ಗೆ ಪರೋಕ್ಷ ಅಸಮಾಧಾನ
ಟಿಕೆಟ್ ನಿರಾಸೆ: ಬಿಜೆಪಿಯಲ್ಲಿ ಭಿನ್ನಮತದ ಹೊಗೆ
ಪ್ರಣಾಳಿಕೆ ಇಲ್ಲ, ಉಪವಾಸ: ಮಹಿಮಾ ಪಕ್ಷ ತಂತ್ರ
ಕನ್ನಡ ಸಾಹಿತ್ಯ ದಿಗ್ಗಜ ಶಾಂತರಸ ಇನ್ನಿಲ್ಲ
ಬಿಜೆಪಿಯ 2ನೇ ಪಟ್ಟಿ: ಅಸಮಾಧಾನ ಸ್ಫೋಟ