ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತನ್ನ ಬಜೆಟ್ ಜನಪ್ರಿಯತೆಗೆ ಹೊಟ್ಟೆಕಿಚ್ಚು: ಯಡಿಯೂರ್
NRB
ತಾನು ಮಂಡಿಸಿದ ಬಜೆಟ್‌ನ ಜನಪ್ರಿಯತೆಯನ್ನು ಸಹಿಸದ ಕಾಂಗ್ರೆಸ್, ಸಮ್ಮಿಶ್ರ ಸರಕಾರ ಪತನಗೊಳ್ಳಲು ಬಯಸಿತ್ತು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ತಮ್ಮ ಬಜೆಟ್ ಅನ್ನು ಅಲ್ಲಾವುದ್ದೀನ್ ದೀಪ ಅಲ್ಲ. ಅದು ಕೇವಲ ಪೊಳ್ಳು ಅಶ್ವಾಸನೆ ಎಂದು ಟೀಕಿಸಿರುವ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕೆಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಪ್ರತಿಕ್ರಿಯೆ ನೀಡಿದ್ದಾರೆ.

ದಾವಣಗೆರೆಯ ರೈತ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, "ನನ್ನ ಬಜೆಟ್ ಪೊಳ್ಳು ಭರವಸೆಗಳಿಂದ ಕೂಡಿದ್ದರೆ, ರಾಷ್ಟ್ರಪತಿ ಆಡಳಿತದಲ್ಲಿಯೂ ಬಜೆಟ್ ಕಾರ್ಯಕ್ರಮಗಳು ಪ್ರತಿಫಲಗೊಳ್ಳುವಂತೆ ಏಕೆ ಮಾಡಿತು ಎನ್ನುವುದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ಉತ್ತರ ಹೇಳಬೇಕು" ಎಂದು ಸವಾಲೆಸೆದರು.

"ಹಣಕಾಸು ಸಚಿವನಾಗಿ ನನ್ನ ಆರ್ಥಿಕ ನಿರ್ವಹಣೆಯನ್ನು ಪ್ರಶ್ನಿಸಿರುವ ಸಿದ್ದರಾಮಯ್ಯ, ಬಿಜೆಪಿಗೆ ಆತ್ಮಗೌರವ ಇದೆಯೇ ಎಂದು ಕೇಳಿದ್ದಾರೆ. ಆದರೆ ಹಣಕಾಸು ಸಚಿವನಾಗಿ ನನ್ನ ಕಾರ್ಯವೈಖರಿಗೆ ಕೇಂದ್ರ ಸರಕಾರವೇ ಮೆಚ್ಚುಗೆ ಸೂಚಿಸಿತ್ತು. ಎರಡೂ ವರ್ಷಗಳಲ್ಲಿ ಪ್ರೋತ್ಸಾಹ ಧನವಾಗಿ 650 ಕೋಟಿ ರೂ. ಗಳನ್ನು ಒದಗಿಸಿತ್ತು. ರಾಜ್ಯದ ಅಭಿವೃದ್ದಿಯ ಬಗ್ಗೆ ಸ್ವತ: ಕೇಂದ್ರ ಹಣಕಾಸು ಸಚಿವ ಚಿದಂಬರಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ" ಎಂದು ತಿಳಿಸಿದರು.

ಅಧಿಕಾರ ಹಸ್ತಾಂತರ ವಿಷಯದಲ್ಲಿ ಜೆಡಿಎಸ್ ಮಾಡಿರುವ ವಿಶ್ವಾಸ ದ್ರೋಹವನ್ನು ಜನತೆ ಮರೆತಿಲ್ಲ. ಬಿಜೆಪಿ ಅಧಿಕಾರದಾಹಿ ಅಲ್ಲ ಎನ್ನುವುದನ್ನು ಜನ ಅರಿತಿದ್ದಾರೆ. ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರಲ್ಲಿಯೂ ಬಿಜೆಪಿ ಬಗ್ಗೆ ಒಲವು ಮೂಡಿದೆ. ಆದ್ದರಿಂದ ಅವರು ಪಕ್ಷದತ್ತ ಬರುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ತಲ್ಲಣಗೊಂಡಿದೆ ಎಂದು ಅವರು ನುಡಿದರು.
ಮತ್ತಷ್ಟು
ಕಾಂಗ್ರೆಸ್ ಪಟ್ಟಿ ಬಳಿಕ ಜೆಡಿಎಸ್ ಪಟ್ಟಿ
ಓಟಿಗಾಗಿ ಅಂಬೇಡ್ಕರ್ ಚಿತ್ರ ಬಳಸುವ ಬಿಜೆಪಿ: ಜಯಕುಮಾರ್
ಬಿಜೆಪಿಯಲ್ಲಿ ಬಂಡಾಯದ ಹೊಗೆ: ವರಿಷ್ಠರಿಗೆ ದೂರಲು ನಿರ್ಧಾರ
ವಲಸಿಗರ ಬಗ್ಗೆ ಖರ್ಗೆ ಪರೋಕ್ಷ ಅಸಮಾಧಾನ
ಟಿಕೆಟ್ ನಿರಾಸೆ: ಬಿಜೆಪಿಯಲ್ಲಿ ಭಿನ್ನಮತದ ಹೊಗೆ
ಪ್ರಣಾಳಿಕೆ ಇಲ್ಲ, ಉಪವಾಸ: ಮಹಿಮಾ ಪಕ್ಷ ತಂತ್ರ