ಮಂಗಳೂರು: ತಮಿಳುನಾಡಿನಿಂದ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 13 ಲಕ್ಷರೂಪಾಯಿ ಮೌಲ್ಯದ ಸ್ಪಿರಿಟನ್ನು ಉಳ್ಳಾಲದ ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಉಳ್ಳಾಲದ ಪೊಲೀಸರು ಲಾರಿಯನ್ನು ಶೋಧಿಸಿದಾಗ ಇದು ಪತ್ತೆಯಾಗಿದ್ದು, ಸ್ಪಿರಿಟ್ ಮೌಲ್ಯ ಸುಮಾರು 13 ಲಕ್ಷ ಎಂದು ಅಂದಾಜಿಸಲಾಗಿದೆ. ಆದರೆ ಲಾರಿಯಲ್ಲಿದ್ದ ಚಾಲಕ ಹಾಗೂ ಇನ್ನೊಬ್ಬ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಗೋವಾ ಮೂಲದ ಸ್ಪಿರಿಟನ್ನು ತಮಿಳುನಾಡಿನಿಂದ ಕೇರಳಕ್ಕೆ ಸಾಗಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಸುಮಾರು 350 ಕ್ಯಾನ್‌ಗಳಲ್ಲಿ ಇದನ್ನು ತುಂಬಿಡಲಾಗಿತ್ತು. ಅಲ್ಲದೆ, ಇದರ ಮೇಲೆ ಪೈವುಡ್‌ಗಳನ್ನು ಹಾಸಿ ಮರೆಮಾಚಲಾಗಿತ್ತು ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಈಗಾಗಲೇ ಸಾರಾಯಿಯನ್ನು ನಿಷೇಧಿಸಲಾಗಿದೆ. ಆದರೆ ರಾಜ್ಯ ಚುನಾವಣಾ ಹಿನ್ನೆಲೆಯಲ್ಲಿ ಅಕ್ರಮವಾಗಿ ಹೊರರಾಜ್ಯಗಳಿಂದ ಸರಾಯಿ ಸಾಗಾಟವಾಗಬಹುದೆಂಬ ನಿಟ್ಟಿನಲ್ಲಿ ಗಡಿ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
|