ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಡಿಎಸ್: ಪ್ರಥಮ ಪಟ್ಟಿಯಲ್ಲಿ 117 ಮಂದಿ
ಬೆಂಗಳೂರು: ಜಾತ್ಯತೀತ ಜನತಾದಳ ಮೊದಲ ಪಟ್ಟಿ ಅಂತಿಮಗೊಂಡಿದ್ದು, ಇದರಲ್ಲಿ 117 ಮಂದಿ ಅವಕಾಶ ಗಿಟ್ಟಿಸಿದ್ದಾರೆ.

ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಡಿ. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಇತರೆ ಮುಖಂಡರು ಪಾಲ್ಗೊಂಡಿದ್ದರು.

ಸಲ್ಲಿಕೆಯಾಗಿರುವ ಅರ್ಜಿಗಳನ್ನು ಎರಡು ತಾಸಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಪರೀಶೀಲಿಸಲಾಯಿತು. ಈ ಬಗ್ಗೆ ಹೇಳಿಕೆ ನೀಡಿರುವ ಮಂಜುನಾಥ್, ಮೊದಲ ಹಂತದ ಪಟ್ಟಿಯಲ್ಲಿ ಸುಮಾರು 117 ಕ್ಷೇತ್ರಗಳಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳ ಹೆಸರನ್ನು ಸಭೆಯಲ್ಲಿ ಅಂತಿಮಗೊಳಿಸಲಾಗಿದ್ದು, ಪಕ್ಷದ ವರಿಷ್ಠರಿಗೆ ಕಳುಹಿಸಲಾಗಿದೆ. ಬಳಿಕ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಎರಡು ಮತ್ತು ಮೂರನೇ ಹಂತದ ಚುನಾವಣೆಗೆ ಮತ್ತೆ ಸಭೆ ಸೇರಿ ಪರಿಶೀಲಿಸಲಾಗುವುದು. ಆದರೆ ಅದನ್ನು ಬಿಡುಗಡೆ ಮಾಡಲು ಆತುರವಿಲ್ಲ. ಕೆಲ ಜಿಲ್ಲಾಧ್ಯಕ್ಷರು ತಡವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಆದ್ದರಿಂದ ನಾಮಪತ್ರ ಸಲ್ಲಿಕೆ ಆರಂಭವಾದ ನಂತರ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಟಿಕೆಟ್‌ಗಾಗಿ ಪೈಪೋಟಿ:
ರಾಜ್ಯದ ನಾನಾ ಭಾಗಗಳಿಂದ ಆಗಮಿಸಿರುವ ಕಾರ್ಯಕರ್ತರು, ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಪಕ್ಷದ ಎಲ್ಲ ಮುಖಂಡರ ಮುಂದೆ ಆಗ್ರಹಿಸುವುದನ್ನು ಮುಂದುವರಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಮನೆ, ಕುಮಾರಸ್ವಾಮಿ ಹಾಗೂ ಮೆರಾಜುದ್ದೀನ್ ಪಟೇಲ್ ಮನೆ ಸೇರಿದಂತೆ ಹೆಚ್ಚಿನ ಎಲ್ಲ ನಾಯಕರ ಮನೆ ಜಗುಲಿ ಟಿಕೆಟ್ ಆಕಾಂಕ್ಷಿಗಳಿಂದ ತುಳುಕುತ್ತಿತ್ತು.
ಮತ್ತಷ್ಟು
ಅಕ್ರಮ ಸಾಗಾಟ: 13ಲಕ್ಷ ಮೌಲ್ಯದ ಸ್ಪಿರಿಟ್ ವಶ
ಮೈಸೂರು: ಬಿಜೆಪಿ ಮಹಿಳಾ ಸಮಾವೇಶ
'ಕೈ' ಹಿಡಿದ ಲಾಡ್, 'ಕೈ' ಬಿಟ್ಟ ದಿವಾಕರ್
ಅಭ್ಯರ್ಥಿಗಳ ಸಾಮಾಜಿಕ ಕಾರ್ಯಕ್ಕೆ ನಿರ್ಬಂಧ
ತನ್ನ ಬಜೆಟ್ ಜನಪ್ರಿಯತೆಗೆ ಹೊಟ್ಟೆಕಿಚ್ಚು: ಯಡಿಯೂರ್
ಕಾಂಗ್ರೆಸ್ ಪಟ್ಟಿ ಬಳಿಕ ಜೆಡಿಎಸ್ ಪಟ್ಟಿ