ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿಯಲ್ಲಿ ಭಿನ್ನಮತ ಉಲ್ಬಣ
ಮನವೊಲಿಕೆಗೆ ನಾಯಕರ ಕಸರತ್ತು
ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಯ ವಿಚಾರದಿಂದ ಅಸಮಾಧಾನ, ಭಿನ್ನಮತ ಮತ್ತಷ್ಟು ಉಲ್ಬಣಗೊಂಡಿದ್ದು ತತ್ಪರಿಣಾಮ ರಾಜ್ಯಾದ್ಯಂತ ಹಲವೆಡೆ ಪ್ರತಿಭಟನೆಗಳು ನಡೆದಿವೆ.

ಈಗಾಗಲೇ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಮನವೊಲಿಸಲು ಬಿಜೆಪಿ ನಾಯಕರು ಕಸರತ್ತು ಪ್ರಾರಂಭಿಸಿದ್ದಾರೆ. ಆದರೆ ಶಕುಂತಳಾ ಇದಕ್ಕೆ ಮಣಿದಿಲ್ಲ. ಬಿಜೆಪಿ ಹಿರಿಯ ಮುಖಂಡರಾದ ಅನಂತ್ಕುಮಾರ್ ಹಾಗೂ ಬಿ.ಎಸ್. ಯಡಿಯೂರಪ್ಪ ಅವರುಗಳು ಶಕುಂತಳಾ ಅವರೊಂದಿಗೆ ದೂರವಾಣಿ ಮುಖಾಂತರ ಮಾತುಕತೆ ನಡೆಸಿ, ವಿಧಾನ ಪರಿಷತ್ ಸೀಟು ನೀಡುವ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ ಶಕುಂತಳಾ ಶೆಟ್ಟಿ ಇದನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ, ರಾಜ್ಯದಲ್ಲಿ ಟಿಕೆಟ್ ಹಂಚಿಕೆ ದುಡ್ಡಿನ ಮೇಲೆ ಮಾರಾಟವಾಗುತ್ತಿದ್ದು, ವಲಸಿಗರಿಂದ ಹಣ ಪಡೆದು ಮಣಿ ಹಾಕಲಾಗುತ್ತದೆ ಎಂಬುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಬಿಜೆಪಿ ಕಚೇರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರು ಸಿದ್ಧಪಡಿಸುತ್ತಿರುವ ಅಭ್ಯರ್ಥಿಗಳ ಪಟ್ಟಿ ಈಗ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಮಧ್ಯೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಮಾಲೂರಿನ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅವರನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಲಾಗಿದೆ. ಹಳ್ಳಿಯ ಜನರಿಗೆ ಹಂಚಲು ಶೀಟ್ ಹಾಗೂ ಸಿಮೆಂಟ್ ದಸ್ತಾನು ಮಾಡಿದ್ದರು ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅದನ್ನು ವಶಪಡಿಸಿ, ಅವರನ್ನು ಬಂಧಿಸಲಾಗಿತ್ತು. ಈ ಘಟನೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದ ಕೃಷ್ಣಯ್ಯ, ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ.
ಮತ್ತಷ್ಟು
ಜೆಡಿಎಸ್: ಪ್ರಥಮ ಪಟ್ಟಿಯಲ್ಲಿ 117 ಮಂದಿ
ಅಕ್ರಮ ಸಾಗಾಟ: 13ಲಕ್ಷ ಮೌಲ್ಯದ ಸ್ಪಿರಿಟ್ ವಶ
ಮೈಸೂರು: ಬಿಜೆಪಿ ಮಹಿಳಾ ಸಮಾವೇಶ
'ಕೈ' ಹಿಡಿದ ಲಾಡ್, 'ಕೈ' ಬಿಟ್ಟ ದಿವಾಕರ್
ಅಭ್ಯರ್ಥಿಗಳ ಸಾಮಾಜಿಕ ಕಾರ್ಯಕ್ಕೆ ನಿರ್ಬಂಧ
ತನ್ನ ಬಜೆಟ್ ಜನಪ್ರಿಯತೆಗೆ ಹೊಟ್ಟೆಕಿಚ್ಚು: ಯಡಿಯೂರ್