ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣಿಯೂರನ್ನು ಗೆಲ್ಲುವ ಕುದುರೆ ಯಾವುದು?
ಬಳ್ಳಾರಿಯಲ್ಲಿ ಚುನಾವಣೆಯ ಧಗೆ ಹೆಚ್ಚುತ್ತಿದೆ. ಬಿಜೆಪಿಯಿಂದ ಕಣಕ್ಕಿಳಿಯಲಿರುವ ಜನಾರ್ಧನ ರೆಡ್ಡಿಗೆ ಈಗ ಕಾಂಗ್ರೆಸ್ ಸಡ್ಡು ಹೊಡೆದು ನಿಲ್ಲಲು ತಯಾರಾಗಿದೆ. ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಅನಿಲ್ ಲಾಡ್‌ಗೆ ಬಳ್ಳಾರಿ ನಗರದಿಂದ ಟಿಕೆಟ್ ನೀಡಲು ಕಾಂಗ್ರೆಸ್ ಮುಂದಾಗಿದೆ.

ಜಿಲ್ಲೆಯಲ್ಲಿ ಬಿಜೆಪಿ ಎಂದರೆ ರೆಡ್ಡಿಗಳ ಪಕ್ಷ ಎಂಬಂತಾಗಿದೆ. ಬೇರೆಯವರ ಮಾತಿಗೆ ಅಲ್ಲಿ ಮನ್ನಣೆಯೇ ಇಲ್ಲ. ಇದರಿಂದ ಬೇಸತ್ತು ಪಕ್ಷ ತೊರೆದಿರುವುದಾಗಿ ಹೇಳಿರುವ ಅನಿಲ್ ಲಾಡ್ ಬುಧವಾರ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ಕಳೆದ ಚುನಾವಣೆಯಲ್ಲಿ ಕೂಡ್ಲಿಗಿಯಿಂದ ಆಯ್ಕೆಯಾಗಿದ್ದ ಲಾಡ್ ನಂತರದ ದಿನಗಳಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದು, ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಅನಿಲ್ ಅವರಿಗೆ ಟಿಕೆಟ್ ನೀಡಲು ನಿರಾಕರಿಸಿತ್ತು.

ಈ ಮಧ್ಯೆ ದಶಕಗಳ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿ ಕಳೆದ ಕೆಲವು ವರ್ಷಗಳಿಂದ ಅಧಿಕಾರ ಸ್ಥಾಪಿಸುವುದು ಸಾಧ್ಯವಾಗಿರಲಿಲ್ಲ. ಬಿಜೆಪಿಯಿಂದ ಟಿಕೆಟ್ ವಂಚಿತರಾಗುತ್ತಿದ್ದಂತೆ, ಇತ್ತ ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಪಕ್ಷಕ್ಕೆ ಕರೆಸಿಕೊಳ್ಳುವ ಪ್ರಯತ್ನ ನಡೆಸಿದ್ದರಲ್ಲದೆ, ಅನಿಲ್ ಸಹೋದರ ಸಂತೋಷ್ ಲಾಡ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಲಘಟಗಿಯಿಂದ ಸ್ಪರ್ಧಿಸಲು ಟಿಕೆಟ್ ನೀಡುವ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ.

ಇತ್ತ ಜೆಡಿಎಸ್ ಕೂಡ ಸುಮ್ಮನೆ ಕುಳಿತಿಲ್ಲ. ಅನಿಲ್ ಲಾಡ್ ಹಾಗೂ ರೆಡ್ಡಿ ಸಮಾನಾಗಿರುವವರನ್ನೇ ಕಣಕ್ಕಿಳಿಸಲು ಜೆಡಿಎಸ್ ಮುಂದಾಗಿದೆ. ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ದಿವಾಕರ್ ಬಾಬು ಅವರನ್ನು ಬಳ್ಳಾರಿಯಿಂದ ಕಣಕ್ಕಿಳಿಸಲು ನಿರ್ಧರಿಸಿದೆ. ಒಟ್ಟಾರೆ ಈ ಮೂವರು ನಾಯಕರಲ್ಲಿ ಗಣಿಯ ಧಣಿಯಾಗುವವರು ಯಾರು ಎಂಬ ಗುಟ್ಟು ಮತದಾರನ ಕೈಲಿದೆ.
ಮತ್ತಷ್ಟು
ಬಿಜೆಪಿಯಲ್ಲಿ ಭಿನ್ನಮತ ಉಲ್ಬಣ
ಜೆಡಿಎಸ್: ಪ್ರಥಮ ಪಟ್ಟಿಯಲ್ಲಿ 117 ಮಂದಿ
ಅಕ್ರಮ ಸಾಗಾಟ: 13ಲಕ್ಷ ಮೌಲ್ಯದ ಸ್ಪಿರಿಟ್ ವಶ
ಮೈಸೂರು: ಬಿಜೆಪಿ ಮಹಿಳಾ ಸಮಾವೇಶ
'ಕೈ' ಹಿಡಿದ ಲಾಡ್, 'ಕೈ' ಬಿಟ್ಟ ದಿವಾಕರ್
ಅಭ್ಯರ್ಥಿಗಳ ಸಾಮಾಜಿಕ ಕಾರ್ಯಕ್ಕೆ ನಿರ್ಬಂಧ