ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣಾ ಫಲಿತಾಂಶದ ಬಳಿಕ ಗಣಿ ಹಗರಣ ಬಯಲು
ಬೆಂಗಳೂರು: ಗಣಿ ಹಗರಣದ ಕುರಿತು ಲೋಕಾಯುಕ್ತ ನಡೆಸಿರುವ ತನಿಖೆ ಬಹುತೇಕ ಪೂರ್ಣಗೊಂಡಿದೆ ಎಂದು ಲೋಕಾಯುಕ್ತ ನ್ಯಾ|ಸಂತೋಷ್ ಹೆಗ್ಡೆ ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಚುನಾವಣಾ ಫಲಿತಾಂಶದ ಬಳಿಕ ಗಣಿ ಹಗರಣವನ್ನು ಬಯಲು ಮಾಡುವುದಾಗಿ ತಿಳಿಸಿದ್ದಾರೆ.

2000ದಿಂದ 2006ರವರೆಗೆ ನಡೆದ ಗಣಿ ಹಗರಣದಲ್ಲಿ ಅನೇಕ ರಾಜಕಾರಣಿಗಳ ಕೈವಾಡವಿರುವುದು ಬೆಳಕಿಗೆ ಬಂದಿರುವುದರಿಂದ ಚುನಾವಣೆ ಬಳಿಕ ಪ್ರಕಟಿಸುವುದು ಸೂಕ್ತವಾಗಿದೆ ಎಂದು ಹೇಳಿರುವ ಅವರು ಈ ಕುರಿತು ನಿವೃತ್ತ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿ ನೇತೃತ್ವದ ಸರಕಾರದ ಸಂದರ್ಭದಲ್ಲಿ ಗಣಿ ಹಗರಣದ ತನಿಖೆ ಆರಂಭಿಸಿದ ಲೋಕಾಯುಕ್ತ ಅಧಿಕಾರಿಗಳು ಇದೀಗ ತನಿಖೆಯನ್ನು ಬಹುತೇಕ ಪೂರ್ಣಗೊಳಿಸಿದ್ದು, ರಾಜ್ಯಪಾಲರಿಗೆ ಸಲ್ಲಿಸಬೇಕಾಗಿದೆ. ಆದರೆ ಇದನ್ನೇ ಚುನಾವಣಾ ಲಾಭವನ್ನಾಗಿ ರಾಜಕೀಯ ಪಕ್ಷಗಳು ಬಳಸಿಕೊಳ್ಳಬಹುದೆಂಬ ದೃಷ್ಟಿಯಿಂದ ತನಿಖೆಯ ವಿವರವನ್ನು ಸದ್ಯಕ್ಕೆ ಬಹಿರಂಗಗೊಳಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಹಾಸನ: ಭೀಕರ ಅಪಘಾತಕ್ಕೆ ನಾಲ್ಕು ಬಲಿ
ಬಂಗಾರಪ್ಪ ಮರಳಿ ಗೂಡಿಗೆ?
ಗಣಿಯೂರನ್ನು ಗೆಲ್ಲುವ ಕುದುರೆ ಯಾವುದು?
ಬಿಜೆಪಿಯಲ್ಲಿ ಭಿನ್ನಮತ ಉಲ್ಬಣ
ಜೆಡಿಎಸ್: ಪ್ರಥಮ ಪಟ್ಟಿಯಲ್ಲಿ 117 ಮಂದಿ
ಅಕ್ರಮ ಸಾಗಾಟ: 13ಲಕ್ಷ ಮೌಲ್ಯದ ಸ್ಪಿರಿಟ್ ವಶ