ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊದಲ ದಿನದಲ್ಲಿ 7 ನಾಮಪತ್ರ ಸಲ್ಲಿಕೆ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಪ್ರಕ್ರಿಯೆಗಳು ಬುಧವಾರ ಆರಂಭಗೊಂಡಿದ್ದು, ಮೊದಲ ಹಂತದ ಚುನಾವಣೆಗಾಗಿ ಪ್ರಥಮ ದಿನದಲ್ಲಿ ಒಟ್ಟು ಏಳು ನಾಮಪತ್ರಗಳು ಸಲ್ಲಿಕೆಯಾಗಿವೆ.

11 ಜಿಲ್ಲೆಗಳ ಒಟ್ಟು 89ಕ್ಷೇತ್ರಗಳ ಪೈಕಿ ಕೋಲಾರ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಿದ್ದರೆ, ಕುಣಿಗಲ್, ಮಧುಗಿರಿ, ಚಾಮರಾಜ, ಶ್ರವಣಬೆಳಗೊಳ ಮತ್ತು ಚನ್ನಪಟ್ಟಣದಲ್ಲಿ ತಲಾ ಒಬ್ಬ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಏಪ್ರಿಲ್ 23ರಂದು ಕೊನೆಯ ದಿನಾಂಕವಾಗಿದ್ದು, ಒಟ್ಟು 1.72ಕೋಟಿ ಮತದಾರರು ಮೊದಲ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಈ ವೇಳೆ ಒಟ್ಟು ಶೇಕಡಾ 43ರಷ್ಟು ಮತದಾರರು ಪಾಲ್ಗೊಳ್ಳಲಿದ್ದಾರೆ.

ಕ್ಷೇತ್ರ ಪುನರ್ ವಿಂಗಡಣಾ ಆಧಾರದಲ್ಲಿ ಚುನಾವಣೆ ನಡೆಯುತ್ತಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿರುವುದರಿಂದ ಮೊದಲ ಹಂತದ ಚುನಾವಣೆಗೆ ಮಹತ್ವ ಬಂದಿದೆ. ಈ ನಿಟ್ಟಿನಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗವು ಅಭೂತಪೂರ್ವ ತಯಾರಿ ನಡೆಸಿದೆ. ಈ ಮಧ್ಯೆ, ಕೆಲ ರಾಜಕೀಯ ಪಕ್ಷಗಳಲ್ಲಿ ಇನ್ನೂ ಕೂಡ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸಿಲ್ಲ. ಆಯ್ಕೆ ಕಸರತ್ತು ಮುಂದುವರೆಸಿರುವ ರಾಜಕೀಯ ಪಕ್ಷಗಳು ಗೆಲ್ಲುವ ಅಭ್ಯರ್ಥಿಗಳ ಆಯ್ಕೆಯ ತಯಾರಿಯಲ್ಲಿದೆ.
ಮತ್ತಷ್ಟು
ಚುನಾವಣಾ ಫಲಿತಾಂಶದ ಬಳಿಕ ಗಣಿ ಹಗರಣ ಬಯಲು
ಹಾಸನ: ಭೀಕರ ಅಪಘಾತಕ್ಕೆ ನಾಲ್ಕು ಬಲಿ
ಬಂಗಾರಪ್ಪ ಮರಳಿ ಗೂಡಿಗೆ?
ಗಣಿಯೂರನ್ನು ಗೆಲ್ಲುವ ಕುದುರೆ ಯಾವುದು?
ಬಿಜೆಪಿಯಲ್ಲಿ ಭಿನ್ನಮತ ಉಲ್ಬಣ
ಜೆಡಿಎಸ್: ಪ್ರಥಮ ಪಟ್ಟಿಯಲ್ಲಿ 117 ಮಂದಿ