ಮುಂದಿನ ತಿಂಗಳು ಮೇ 11ರಂದು ಎಚ್ಎಎಲ್ ವಿಮಾನ ನಿಲ್ದಾಣವನ್ನು ಮುಚ್ಚಲಿರುವ ಆಜ್ಞೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಎಚ್ಎಎಲ್ ವಿಮಾನ ನಿಲ್ದಾಣವನ್ನು ಮುಂದುವರೆಸುವ ಹಾಗೂ ಪ್ರಯಾಣಿಕರ ಮೇಲೆ ಹೇರಲಾಗುವ ಬಳಕೆದಾರ ಶುಲ್ಕ ರದ್ಧತಿಗೆ ಸಂಸತ್ತಿನ ಸ್ಥಾಯಿ ಸಮಿತಿ ಮಾಡಿರುವ ಸಲಹೆ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸೇರಿ ಬಿಐಎಎಲ್ನೊಂದಿಗೆ ಮರುಸಂಧಾನ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ.
"ಸಾರ್ವಜನಿಕ ಹಿತಾಸಕ್ತಿ ಹಾಗೂ ಪ್ರಯಾಣಿಕರಿಗೆ ಆಗುವ ತೊಂದರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಸಂಧಾನ ನಡೆಸಬೇಕು ಎಂದು ಸ್ಪಷ್ಟಪಡಿಸಿರುವ ವಿಭಾಗೀಯ ಪೀಠ, ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಅಂತಿಮ ವಿಚಾರಣೆಯನ್ನು ಜೂನ್ ಎರಡನೇ ವಾರಕ್ಕೆ ಮುಂದೂಡಿದೆ
ಲಿಹೊಸ ವಿಮಾನ ನಿಲ್ದಾಣ ನಗರದಿಂದ 40 ಕಿ.ಮೀ ದೂರವಿದೆ ಎಂಬ ಕಾರಣಕ್ಕೆ ಹಳೆಯ ವಿಮಾನ ನಿಲ್ದಾಣ ಕಾರ್ಯಸ್ಥಗಿತ ನಿರ್ಣಯಕ್ಕೆ ತಡೆ ವಿಧಿಸಬೇಕು ಎಂಬ ಅರ್ಜಿದಾರರ ವಾದದಲ್ಲಿ ಬಲವಿಲ್ಲ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲ ನಗರಗಳಲ್ಲಿ ವಿಮಾನ ನಿಲ್ದಾಣಗಳು ನಗರದಿಂದ ಹೊರಗೇ ಇರುತ್ತದೆ. ಸಂಚಾರ ವ್ಯವಸ್ಥೆ ಉತ್ತಮಪಡಿಸುವುದರಿಂದ ಈ ಸಮಸ್ಯೆ ನಿವಾರಿಸಬಹುದಾಗಿದೆಳಿ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
|