ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌ಗೆ ಮುಜುಗರ ಹುಟ್ಟಿಸಿದ ಲಾಡ್
ಬೆಂಗಳೂರು: ಬಿಜೆಪಿಯೊಂದಿಗೆ ಭಿನ್ನಮತದಿಂದಾಗಿ ಕಾಂಗ್ರೆಸ್ ಸೇರಿದ ಗಣಿ ಉದ್ಯಮಿ, ಕೂಡ್ಲಿಗಿ ಶಾಸಕ ಅನಿಲ್ ಲಾಡ್ ಸೇರಿದ ಮೊದಲ ದಿನವೇ ಕಾಂಗ್ರೆಸ್ಗೆ ಇರುಸು ಮುರುಸು ಉಂಟು ಮಾಡಿದ್ದಾರೆ.

ಯಾವ ಗಣಿ ಲಂಚ ಹಗರಣವನ್ನು ಕಾಂಗ್ರೆಸ್ ಹಿಡಿದು ಕುಮಾರಸ್ವಾಮಿಯವರನ್ನು ಜಗ್ಗಾಡಿತ್ತೋ ಆ ಗಣಿ ಲಂಚ ಆರೋಪವನ್ನು ಅನಿಲ್ ಸಾರಾಸಗಟಾಗಿ ತಳ್ಳಿ ಹಾಕಿದರು. 150 ಕೋಟಿ ರೂ. ಗಳ ಗಣಿ ಲಂಚ ಹಗರಣ ಬರೀ ಸುಳ್ಳಿನ ಕಂತೆ. ಇದೆಲ್ಲಾ ಜನಾರ್ಧನ ರೆಡ್ಡಿ ಸಹೋದರರು ಮಾಡಿದ ಹುರುಳಿಲ್ಲದ ಆರೋಪ. ಇದರಲ್ಲಿ ಯಾವುದೇ ಗಣಿ ದೊರೆಗಳ ಕೈವಾಡವಿಲ್ಲ ಎಂದು ಸ್ವಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಕುಮಾರಸ್ವಾಮಿ ಅವರ ಆಪ್ತ ಎಂದು ಸಮರ್ಥಿಸಿಕೊಂಡರು. "ಕುಮಾರಸ್ವಾಮಿ ಅವರ ಜತೆಗಿನ ನನ್ನ ಸ್ನೇಹ ಚೆನ್ನಾಗಿದೆ. ಈಗಲೂ ಸಂಬಂಧವಿದೆ. ಆದರೆ ಅದು ಎಂಥ ಸಂಬಂಧ ಎಂದು ನನಗೆ ಇನ್ನೂ ಗೊತ್ತಿಲ್ಲ" ಎಂದು ಅವರು ಹೇಳಿರುವುದು ಗಣಿ ಲಂಚ ಹಗರಣ ವಿರುದ್ಧ ವಿಧಾನಸಭೆ ಒಳಗೆ ಮತ್ತು ಹೊರಗೆ ಹೋರಾಡಿದ್ದ ಕಾಂಗ್ರೆಸ್ಸಿಗರಿಗೆ ಅವಮಾನವಾದಂತಾಗಿದೆ.

ಗಣಿ ಲಂಚ ಹಗರಣವನ್ನು ರೆಡ್ಡಿ ರಾಷ್ಟ್ರೀಯ ಸುದ್ದಿ ಮಾಡಿದರು. ಶ್ರೀರಾಮುಲು ಅವರು ಕುಮಾರಸ್ವಾಮಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿದರು. ಕೇವಲ ಒಬ್ಬ ಎಸ್ಪಿ ವರ್ಗಾವಣೆ ವಿಷಯದಲ್ಲಿ ಸರ್ಕಾರವನ್ನೇ ಕೆಡವಲು ಯತ್ನಿಸಿದರು. ಇಂಥವರ ನಡವೆ ಬಿಜೆಪಿಯಲ್ಲಿ ಹೇಗೆ ಇರಲು ಸಾಧ್ಯ ಎಂದು ಬಹಿರಂಗವಾಗಿ ಅನಿಲ್ ಲಾಡ್ ಬಿಜೆಪಿಯನ್ನು ದೂರಲು ಹೋಗಿ ಜೆಡಿಎಸ್ ಹೊಗಳಿದ್ದು, ಕಾಂಗ್ರೆಸ್ಸಿಗರಿಗೆ ಅಸಮಾಧಾನವಾಗಿದೆ.
ಮತ್ತಷ್ಟು
ಎಚ್ಎಎಲ್: ತಡೆಯಾಜ್ಞೆಗೆ ಹೈಕೋರ್ಟ್ ನಕಾರ
ಗುರುತಿನ ಚೀಟಿಗಾಗಿ ವಿವಿಧೆಡೆ ಡ್ರಾಪ್ ಬಾಕ್ಸ್
ಮೊದಲ ದಿನದಲ್ಲಿ 7 ನಾಮಪತ್ರ ಸಲ್ಲಿಕೆ
ಚುನಾವಣಾ ಫಲಿತಾಂಶದ ಬಳಿಕ ಗಣಿ ಹಗರಣ ಬಯಲು
ಹಾಸನ: ಭೀಕರ ಅಪಘಾತಕ್ಕೆ ನಾಲ್ಕು ಬಲಿ
ಬಂಗಾರಪ್ಪ ಮರಳಿ ಗೂಡಿಗೆ?