ಬೆಂಗಳೂರು: ಕಾಂಗ್ರೆಸ್ ಅಣತಿಯಂತೆ ರಾಜ್ಯಪಾಲರು ವರ್ಗಾವಣೆ ಆದೇಶ ಮೇಲಿಂದ ಮೇಲೆ ನೀಡುತ್ತಿದ್ದು, ಇದರ ವಿರುದ್ಧ ಅಂಕಿ ಅಂಶಗಳ ಸಮೇತ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಬಂಡಾಯದ ಬಿಸಿ ತಟ್ಟದು ಟಿಕೆಟ್ ಹಂಚಿಕೆಯಿಂದ ಉಂಟಾಗಿರುವ ಬಂಡಾಯದ ಬಿಸಿ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ತಟ್ಟುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಖಚಿತವಾಗುತ್ತಿದ್ದಂತೆ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಿನ್ನಾಭಿಪ್ರಾಯಗಳು ಕಂಡುಬರುವುದು ಸಹಜ ಎಂದು ತಿಳಿಸಿದ ಅವರು, ಇದು ಪಕ್ಷದ ಗೆಲುವಿಗೆ ಯಾವುದೇ ತೊಡಕಾಗುವುದಿಲ್ಲ ಎಂದು ತಿಳಿಸಿದರು.
ಗೆಲ್ಲುವ ಅಭ್ಯರ್ಥಿಯನ್ನು ಗುರಿಯಾಗಿಟ್ಟುಕೊಂಡು ಸಿದ್ಧಪಡಿಸಿರುವ ಪಟ್ಟಿಯನ್ನು ಈಗಾಗಲೇ ದೆಹಲಿಗೆ ಕಳುಹಿಸಲಾಗಿದ್ದು, ಆ ಪಟ್ಟಿಯೇ ಅಂತಿಮವಾಗಲಿದೆ. ಇದರಿಂದ ಏನೇ ಭಿನ್ನಾಭಿಪ್ರಾಯಗಳು ಕಂಡು ಬಂದರೂ, ಪಕ್ಷ ಅಧಿಕಾರಕ್ಕೆ ಬಂದಾಗ ಎಲ್ಲಾ ನಿವಾರಣೆಯಾಗುತ್ತದೆ ಎಂದು ಅವರು ತಿಳಿಸಿದರು.
ಪ್ರಣಾಳಿಕೆಯ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಭರವಸೆ ನೀಡಿ ಮಕ್ಮಲ್ ಟೋಪಿ ಹಾಕಲಿದೆ. ಆದರೆ ಬಿಜೆಪಿ ಹೇಳಿದ್ದನ್ನು ಮಾಡಿಯೇ ತೀರುತ್ತದೆ. ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಉಚಿತ ಶಿಕ್ಷಣ, ಬಡವರಿಗೆ 2ರೂ. ಗೆ ಅಕ್ಕಿ, ಶೇ. 3ರ ಬಡ್ಡಿದರದಲ್ಲಿ ಸಾಲ ನೀಡುವುದು ಸೇರಿದಂತೆ ಹಲವು ಪ್ರಗತಿದರ ಅಂಶಗಳನ್ನು ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಮಧ್ಯೆ ರಾಜ್ಯಪಾಲರ ವರ್ಗಾವಣೆ ಕುರಿತು ಮಾತನಾಡಿದ ಅವರು,
|